ನಾಸಿಕ್ ನಲ್ಲಿ ಕುಂಭಮೇಳ ಆರಂಭ: ಸಾವಿರಾರು ಯಾತ್ರಿಕರಿಂದ ಪುಣ್ಯಸ್ನಾನ
ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ಎನಿಸಿಕೊಂಡಿರುವ ಸಿಂಹಸ್ತ ಕುಂಭಮೇಳ ನಾಸಿಕ್ ನಲ್ಲಿ ಮಂಗಳವಾರ ವೈಭವಯುತವಾಗಿ ಆರಂಭಗೊಂಡಿದೆ...
ನಾಸಿಕ್/ತ್ರ್ಯಂಬಕೇಶ್ವರ: ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ಎನಿಸಿಕೊಂಡಿರುವ ಸಿಂಹಸ್ತ ಕುಂಭಮೇಳ ನಾಸಿಕ್ ನಲ್ಲಿ ಮಂಗಳವಾರ ವೈಭವಯುತವಾಗಿ ಆರಂಭಗೊಂಡಿದೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಮೇಘ ಮಾ ಸದಲ್ಲಿ ಸೂರ್ಯ ಮತ್ತು ಗುರು ಒಟ್ಟಿಗೆ ಬಂದಾಗ ನಡೆಯುತ್ತದೆ. ನಾಸಿಕ್ ನ ರಾಮಕುಂದ್ ನಲ್ಲಿ ಗೋದಾವರಿ ನದಿ ತೀರದಲ್ಲಿ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಚಾಲನೆ ನೀಡಿದರು.
ತ್ರ್ಯಂಭಕೇಶ್ವರದ ಕುಶ್ವರ್ತ ತೀರ್ಥದಲ್ಲಿ ನಡೆದ ಮತ್ತೊಂದು ಕುಂಭಮೇಳ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಕುಂಭಮೇಳ ಆರಂಭದಂದು ಸುಮಾರು 1 ಕೋಟಿ ಯಾತ್ರಿಗರು ಮೊದಲ ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ. ಸಾಮಾನ್ಯ ಯಾತ್ರಿಗರು ಮಾತ್ರವಲ್ಲದೆ ಸಾವಿರಾರು ಸಾಧುಗಳು ಆಗಮಿಸಿದ್ದಾರೆ. ಕುಂಭಮೇಳದ ಪ್ರಯುಕ್ತ ಶೋಭಾಯಾತ್ರೆ ಕೈಗೊಳ್ಳಲಾಗಿದೆ.
ಮಹಾರಾಷ್ಟ್ರ ಸರ್ಕಾರ ಸಾಧುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.