ದೇಶ

ವ್ಯಾಪಂ ಹಗರಣ: ಆಕಾಂಕ್ಷಿ ಒಬ್ಬರು; ಪರೀಕ್ಷಾರ್ಥಿ ಮತ್ತೊಬ್ಬರು

Mainashree

ನವದೆಹಲಿ: ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ಹಗರಣದ ಆಳ ಇಳಿದಷ್ಟೂ ಮುಗಿಯುತ್ತಿಲ್ಲ. ಒಟ್ಟಾರೆಯಾಗಿ ಹಗರಣದಲ್ಲಿ ಡೀಲ್ ಯಾವ ರೀತಿ ಕುದುರಿಸಲಾಯಿತು ಎಂಬ ಬಗ್ಗೆ ಹಗರಣದಲ್ಲಿ ಭಾಗಿಯಾದ ವ್ಯಕ್ತಿ ರಾಷ್ಟ್ರೀಯ ಆಂಗ್ಲ ದಿನಪತ್ರಿಕೆ ಜತೆಗೆ ಮಾಹಿತಿ ಹಂಚಿಕೊಂಡಿದ್ದಾನೆ.

ಮಧ್ಯಪ್ರದೇಶದಲ್ಲಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜು ಪ್ರವೇಶ ಪರೀಕ್ಷೆಯಲ್ಲಿಯೂ ಭಾರಿ ಅಕ್ರಮ ನಡೆದಿತ್ತು ಎನ್ನುವುದನ್ನು ಆತ ಬಹಿರಂಗಪಡಿಸಿದ್ದಾನೆ.  ಕಾಲೇಜಿನ ಅರ್ಹತೆ ನೋಡಿ ಪ್ರತಿ ಸೀಟಿಗೆ ರು.5 - ರು.50 ಲಕ್ಷದ ವರೆಗೆ ಹಣ ವಸೂಲು ಮಾಡಲಾಗುತ್ತಿತ್ತು ಎಂದು ಆತ ಮಾಹಿತಿ ನೀಡಿದ್ದಾನೆ. ಇದರ ಜತೆಗೆ ಇಂದೋರ್‍ನ ವೈದ್ಯಕೀಯ ಕಾಲೇಜಿಗೆ ಅಕ್ರಮವಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸಿದ ಕೊಡಿಸಿದ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‍ಐಟಿ 40 ಸಾವಿರ ನಕಲು ಅಭ್ಯರ್ಥಿಗಳ ಫೋಟೋಗಳನ್ನು ಪರಿಶೀಲಿಸಿದೆ.

ಅವರೆಲ್ಲ ನಿಗದಿತ ಪರೀಕ್ಷಾರ್ಥಿಗಳ ಪರವಾಗಿ ಪ್ರವೇಶ ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳಿಗೆ ಪ್ರವೇಶ ಕೊಡಿಸುವ ಸಲುವಾಗಿ, ಪ್ರವೇಶ ಪತ್ರವನ್ನು ಫೋಟೋಶಾಪ್ ಬಳಸಿ ನಕಲು ಮಾಡಲಾಗಿದೆ. ಪ್ರವೇಶ ಪತ್ರದ ಮೇಲ್ಭಾಗಕ್ಕೆ ನಕಲು ಮಾಡುವ ಅಭ್ಯರ್ಥಿಯ ವಿವರಗಳನ್ನು ಜೋಡಿಸಿ, ಕೆಳಗಿನ ಭಾಗಕ್ಕೆ ಅಸಲಿ ಅಭ್ಯರ್ಥಿಯ ವಿವರ ಜೋಡಿಸಿ ಪ್ರವೇಶ ಪತ್ರವನ್ನು ನಕಲು ಮಾಡಲಾಗಿದೆ. `ವ್ಯಾಪಂ ಹಗರಣದ ಹಿಂದಿನ ವಂಚಕರು ಉತ್ತಮ ಸಂಪರ್ಕ ಹೊಂದಿದ್ದಾರೆ' ಎಂದು ಅವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಎಸ್‍ಟಿಎಫ್ ಮಾಹಿತಿ ನೀಡಿದ್ದಾರೆ.

`ಪ್ರಕರಣದ ಆರೋಪಿಗಳಾಗಿದ್ದ ಅಂಜು ಉಕೈ, ಅನ್ಶೂಲ್ ಸಾಚನ್ ಮತ್ತು ಶ್ಯಾಮ್ ವೀರ್ ಯಾದವ್ ಈ ಮೂರು ಮಂದಿ ರಸ್ತೆ ಅಪಘಾತದಲ್ಲಿ ಒಟ್ಟಿಗೆ ಮೃತಪಟ್ಟಿದ್ದರು. ಅಲ್ಲದೆ, ಆ ಮೂವರು ಒಬ್ಬರಿಗೊಬ್ಬರು ಸಂಪರ್ಕ ಹೊಂದಿದ್ದರು. ಮೂರು ಹಂತ: ``ಅಭ್ಯರ್ಥಿಗಳಿಗೆ ಸೀಟು ಕೊಡಿಸುವ ಪ್ರಕ್ರಿಯೆ ಮೂರು ಹಂತದಲ್ಲಿ ನಡೆಯುತ್ತಿತ್ತು. ಮೊದಲ ಹಂತದಲ್ಲಿರುವವರು ಇಡೀ ಜಾಲವನ್ನೇ ನಿಯಂತ್ರಿಸು ತ್ತಿದ್ದರು. ಸೀಟಿಗಾಗಿ ಹಣ ಸುರಿಯಲು ಸಿದಟಛಿರಿರುವ ವಿದ್ಯಾರ್ಥಿಗಳು ಎರಡನೇ ಹಂತದಲ್ಲಿ ಬರುತ್ತಾರೆ.

ಹಣಕ್ಕಾಗಿ ಪರೀಕ್ಷೆಯನ್ನು ನಕಲು ಮಾಡುವ ಬಡಪಾಯಿ ವಿದ್ಯಾರ್ಥಿಗಳು ಮೂರನೇ ಹಂತದಲ್ಲಿ ಬರುತ್ತಾರೆ. `ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇಂಥ ನಕಲು ಮಾಡುವ ಅಭ್ಯರ್ಥಿಗಳು ಸಿಗುತ್ತಿದ್ದರು. ಬಡತನದ ಹಿನ್ನೆಲೆಯುಳ್ಳವರು ವಂಚಕರಿಗೆ ಸುಲಭವಾಗಿ ಲಭ್ಯವಾಗುತ್ತಿದ್ದರು' ಎಂದು ಆತ ಮಾಹಿತಿ ನೀಡಿದ್ದಾನೆ.

ಸಿಬಿಐ ಭೇಟಿ: ಸಿಬಿಐ ಅಧಿಕಾರಿಗಳ ತಂಡ ಭೋಪಾಲ್‍ನಲ್ಲಿ ಮಂಗಳವಾರ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚಿಸಿತು. ಮತ್ತೊಂದು ಬೆಳವಣಿಗೆಯಲ್ಲಿ ರಾಜ್ಯಪಾಲ ರಾಮïನರೇಶ್ ಯಾದವ್‍ರನ್ನು ಬದಲಾಯಿಸುವ ಬಗ್ಗೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಚಿವರಾದ ರಾಜನಾಥ್ , ಪರ್ರಿಕರ್, ಜೇಟ್ಲಿ ಜತೆ ಚರ್ಚಿಸಿದ್ದಾರೆ.

SCROLL FOR NEXT