ದೇಶ

ಗುಜರಾತ್ ನ ಗಿರ್ ಅಭಯಾರಣ್ಯದಲ್ಲಿ 11 ಸಿಂಹದ ಮರಿ ಜನನ

Shilpa D

ಅಹಮದಾಬಾದ್: ದಿಢೀರ್ ಪ್ರವಾಹದಿಂದ ಗುಜರಾತ್ ನಲ್ಲಿ 10 ಸಿಂಹಗಳು ಸಾವನ್ನಪ್ಪಿದ ಆಘಾತಕಾರಿ ಸುದ್ದಿಯ ನಂತರ ಇದೀಗ ಗಿರ್ ಅಭಯಾರಣ್ಯ ಸಿಹಿ ಸುದ್ದಿ ಬಂದಿದೆ. ನಾಲ್ಕು ಸಿಂಹಿಣಿಗಳು 11 ಮರಿ ಸಿಂಹಗಳಿಗೆ ಜನ್ಮ ನೀಡಿದ್ದು ಎಲ್ಲಾ ಮರಿಗಳು ಆರೋಗ್ಯವಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ಪ್ರಪಂಚದಲ್ಲೇ ಗುಜರಾತ್  500 ಹುಲಿಗಳನ್ನು ಹೊಂದಿರುವ ಬೃಹತ್ ಅಭಯಾರಣ್ಯವಾಗಿದೆ.

ಕಳೆದ ತಿಂಗಳು ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಗಿರ್ ಅಭಯಾರಣ್ಯದಲ್ಲಿ ಜಲಾವೃತವಾಗಿತ್ತು. ಸುಮಾರು 9 ಅಡಿ ನೀರು ಅರಣ್ಯದಲ್ಲಿ ಸಂಗ್ರಹವಾಗಿತ್ತು. ಇದರಿಂದ ಅನಾರೋಗ್ಯಪೀಡಿತವಾಗಿದ್ದ ಸುಮಾರು 10 ಸಿಂಹಗಳು ಸಾವನ್ನಪ್ಪಿದ್ದವು.
ಈ ವೇಳೆ ಗಿರ್ ಅಭಯಾರಣ್ಯದಿಂದ ಸಿಂಹಗಳನ್ನು ಬೇರೆಡೆ  ಸ್ಥಳಾಂತರಗೊಳಿಸಬೇಕೆಂಬುದರ ಬಗ್ಗೆ ಚರ್ಚೆಯೂ ನಡೆದಿತ್ತು. ಸಿಂಹಗಳು ವಾಸಿಸಲು ಸೂಕ್ಚವಾಗಿರುವ ದೇಶದ ಬೇರೆ ಅಭಯಾರಣ್ಯಗಳಿಗೆ ಸ್ಥಳಾಂತರಗೊಳಿಸಬೇಕೆಂದು ಅನೇಕ ವನ್ಯಜೀವಿ ತಜ್ಞರು ಆಗ್ರಹಿಸಿದ್ದರು.

2013 ರಲ್ಲಿ ಸುಪ್ರಿಂ ಕೋರ್ಟ್ ಸೂಚನೆಯಂತೆ ಮದ್ಯಪ್ರದೇಶಕ್ಕೆ ಕೆಲವು ಸಿಂಹಗಳನ್ನು ಸ್ಥಳಾಂತರ ಮಾಡಲಾಗಿತ್ತು. ಆದರೆ ಗುಜರಾತ್ ಸರ್ಕಾರ ಸಿಂಹಗಳ ಸ್ಥಳಾಂತರಗೊಳಿಸುವ ವಿಷಯವನ್ನು ಖಡಾಖಂಡಿತವಾಗಿ ತಿರಸ್ಕರಿಸಿತ್ತು.

SCROLL FOR NEXT