ಅಮಿತಾಬ್ ಬಚ್ಚನ್ 
ದೇಶ

ಕಿಸಾನ್ ಚಾನೆಲ್ ರಾಯಭಾರಿ: 6.31 ಕೋಟಿಗೆ ಬಿಗ್ ಬಿ ಒಪ್ಪಂದ

ದೂರದರ್ಶನದ ಕಿಸಾನ್ ಚಾನೆಲ್ ಗೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇದಕ್ಕಾಗಿ...

ನವದೆಹಲಿ: ದೂರದರ್ಶನದ ಕಿಸಾನ್ ಚಾನೆಲ್ ಗೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇದಕ್ಕಾಗಿ ದೂರದರ್ಶನದ ಅಧಿಕಾರಿಗಳು ಅಮಿತಾಬ್ ಬಚ್ಚನ್ ಅವರೊಂದಿಗೆ 6.31 ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.

ಪ್ರಚಾರ ರಾಯಭಾರಿಯಾಗಿರೋ ಅಮಿತಾಭ್ ಬಚ್ಚನ್ ಕಿಸಾನ್ ಚಾನೆಲ್ ಬಗ್ಗೆ ಪ್ರಚಾರ ನಡೆಸಲಿದ್ದಾರೆ. ಕರಾರಿನಂತೆ ಈಗಾಗಲೇ ಅಮಿತಾಬ್ ಬಚ್ಚನ್ ಅವರಿಗೆ ನಾಲ್ಕು ಕೋಟಿ ಹಣ ನೀಡಲಾಗಿದೆ. ಕಿಸಾನ್ ಚಾನೆಲ್ ಪ್ರಚಾರಕ್ಕಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರದ ಇಲಾಖೆ 45 ಕೋಟಿ ವೆಚ್ಚ ಮಾಡುತ್ತಿದೆ. ಬಿಗ್ ಬಿ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ಈವರೆಗಿನ ದುಬಾರಿ ಒಪ್ಪಂದ ಎಂದು ದೂರದರ್ಶನದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಆದರೆ, ಕಿಸಾನ್ ಚಾನೆಲ್ ಹೆಸರಿನಲ್ಲಿ ಅಮಿತಾಬ್ ಬಚ್ಚನ್ ಕಲ್ಯಾಣವಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಚ್ಚನ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಬಿಗ್ ಬಿಗೆ 6 ಕೋಟಿ 31 ಲಕ್ಷ ನೀಡುವುದು ಅವಶ್ಯವಿತ್ತ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆದರೆ ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಇದೆಲ್ಲ ರೈತರ ಕಲ್ಯಾಣಕ್ಕಾಗಿ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದೆ.

ಈ ಮೊದಲು ಅಮಿತಾಬ್ ಬಚ್ಚನ್ ಅವರನ್ನು ಗುಜರಾತ್ ನ ಪ್ರವಾಸೋದ್ಯಮದ ರಾಯಭಾರಿಯಾಗಿಸಿದ್ದು ಯಶಸ್ವಿಯಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಬಿಗ್ ಬಿ ಅವರನ್ನು ಕಿಸಾನ್ ಚಾನೆಲ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಮೇ 26ರಂದು ದೂರದರ್ಶನದ ಕಿಸಾನ್ ಚಾನೆಲ್ ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಇನ್ನು ಇದಕ್ಕೂ ಮೊದಲು ಕಿಸಾನ್ ಚಾನೆಲ್ ಪ್ರಚಾರ ರಾಯಭಾರಿಯಾಗಿರುವಂತೆ ಬಾಲಿವುಡ್ ನಟ ಅಜಯ್ ದೇವಗನ್, ಪತ್ನಿ ಕಾಜೋಲ್ ಹಾಗೂ ಸಲ್ಮಾನ್ ಖಾನ್ ಅವರನ್ನು ಕೂಡ ಸಂಪರ್ಕಿಸಲಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

SCROLL FOR NEXT