ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜಿಎಸ್‍ಟಿಗೆ ಕಾಂಗ್ರೆಸ್ ವಿರೋಧ?

ದೀರ್ಘಕಾಲದಿಂದ ಸಂಸತ್ತಿನ ಅನುಮೋದನೆ ಕಾಯುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆ ಕುರಿತ ವರದಿಯನ್ನು..

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)
Rashmi Kasaragodu
Updated On : 18 Jul 2015, 1:33 am

ನವದೆಹಲಿ: ದೀರ್ಘಕಾಲದಿಂದ ಸಂಸತ್ತಿನ ಅನುಮೋದನೆ ಕಾಯುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆ ಕುರಿತ ವರದಿಯನ್ನು ಅಂತಿಮಗೊಳಿಸಲು ಮುಂದಿನ ವಾರ ರಾಜ್ಯಸಭೆಯಲ್ಲಿ ಮಂಡಿಸಲು ರಾಜ್ಯಸಭೆ ಸೆಲೆಕ್ಟ್ ಕಮಿತಿ ಕಾಯುತ್ತಿದೆ. ಈ ಕುರಿತ ತನ್ನ ವರದಿಯನ್ನು ಸೋಮವಾರ ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಬೇಕಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಈ ವರದಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ವರದಿಯನ್ನು ಸಲ್ಲಿಸಬೇಕಾದ ದಿನ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಕ್ಟ್ ಕಮಿಟಿ ಮಸೂದೆಯ ಪ್ರತಿ ಕಲಂನ್ನು ಶುಕ್ರವಾರ ಕೂಲಂಕಷವಾಗಿ ಚರ್ಚಿಸಿತು ಎಂದು ಮೂಲಗಳು ತಿಳಿಸಿವೆ. ಆದರೆ ರಾಜ್ಯಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಮಸೂದೆ ಸರಳ ಮತ್ತು ಸಮಗ್ರವಾಗಿಲ್ಲ ಎಂದು ಹೇಳಿ ಆಕ್ಷೇಪ ಟಿಪ್ಪಣಿ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement