ನವದೆಹಲಿ: ಒಂದು ವೇಳೆ ಪಾಕಿಸ್ತಾನದ ಮೊದಲ ಪ್ರಧಾನಿ ಲಿಖಾಯತ್ ಅಲಿ ಖಾನ್ ಸಂಬಂಧಿಕರು ಈ ಯುದ್ಧದಲ್ಲಿ ಗೆದ್ದರೆ ಉತ್ತರಪ್ರದೇಶದ ಮುಜಾಫರ್ ನಗರದ ಅರ್ಧ ಭಾಗ ಅವರ ಪಾಲಾಗಲಿದೆ. ಹೌದು, ಮುಜಾಫರ್ ನಗರಕ್ಕೆ ಸಂಬಧಿಸಿದ ಭೂವ್ಯಾಜ್ಯ ಈಗ ಬಾರಿ ಕುತೂಹಲ ಹುಟ್ಟುಹಾಕಿದೆ. ಈ ಬಗ್ಗೆ ಶುಕ್ರವಾರ ``ದ ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರಿ ಮೌಲ್ಯದ್ದು: ಇದು ಒಟ್ಟಾರೆ ರೂ. 674 ಕೋಟಿ ಭೂ ವ್ಯಾಜ್ಯ. ಇದು ಲಿಖಾಯತ್ ಅಲಿ ಖಾನ್ ಹಾಗೂ ಅವರ ಸಂಬಧಿಕರದು ಎನ್ನುವ ಬೇಡಿಕೆ ವಾದ ಹುಟ್ಟಿಕೊಂಡಿದೆ. ಆದರೆ, ಜಿಲ್ಲಾಡಳಿತ ಮಾತ್ರ ಹಳೆಯ ದಾಖಲೆಗಳನ್ನು ಕೆದಕಿ ನೋಡಿದ್ದು, ಈ ವಾದ ಸುಳ್ಳೆಂದು ಘೋಷಿಸಿದೆ. ಹನ್ನೆರಡು ವರ್ಷಗಳ ಹಿಂದೆ ಲಿಖಾಯತ್ ಅಲಿ ಸಂಬಧಿಕರೆಂದು ಹೇಳಿಕೊಂಡ ಕೆಲವು ಸ್ಥಳೀಯರು ಉತ್ತರಪ್ರದೇಶದ ಕಂದಾಯ ಆಯುಕ್ತರಿಗೆ ಮುಜಾಫರ್‍ನಗರದ ಅರ್ಧ ಆಸ್ತಿ ತಮಗೆ ಸೇರಿದ್ದೆಂದು ಸಾರಿದ್ದರು.
ಜಿಲ್ಲಾಧಿಕಾರಿ ನಿವಾಸ, ರೈಲ್ವೆ ನಿಲ್ದಾಣ, ಕೇಂದ್ರೀಯ ಶಾಲೆ ಮತ್ತಿತರ ಸರ್ಕಾರಿ ಕಚೇರಿಗಳು ಈ ಭೂಮಿಯಲ್ಲೇ ಇದ್ದವು. ಕಂದಾಯ ಆಯುಕ್ತರು ಎರಡು ವಾರಗಳ ಹಿಂದಷ್ಟೇ ಮುಜಾಫರ್‍ನಗರ ಜಿಲ್ಲಾಧಿಕಾರಿಗೆ ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ ನಿಖಿಲ್ ಚಂದ್ರ ಶುಕ್ಲಾ, ಇದೊಂದು ಸುಳ್ಳು ಪ್ರಕರಣ ಎಂದಿದ್ದಾರೆ.