ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಗಿರಿಧರಿ ಲಾಲ್ ಡೋಗ್ರಾ ಅವರ ಶತಮಾ ನೋತ್ಸವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ( ಕೃಪೆ: ಪಿಟಿಐ)
ಜಮ್ಮು/ಜೈಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂ ನಡುವೆ ಮತ್ತೊಮ್ಮೆ ಪರಸ್ಪರ ವಾಗ್ಯುದ್ಧ ನಡೆದಿದೆ. ಮೋದಿ ಅವರು ಜಮ್ಮುವಿನ ಕಾರ್ಯ ಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರೆ, ರಾಹುಲ್ ರಾಜಸ್ಥಾನದಲ್ಲಿ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಗಿರಿಧರಿ ಲಾಲ್ ಡೋಗ್ರಾ ಅವರ ಶತಮಾ ನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಅವರು ಡೋಗ್ರಾರನ್ನು ಹೊಗಳುವ ನೆಪದಲ್ಲಿ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ``ರಾಜ ಕೀಯ ದಾಮಾದ್(ಅಳಿಯ)ಗಳು ಹೇಗಿರುತ್ತಾರೆ ಎಂಬುದು ನಮಗೆಲ್ಲರಿಗೂ ಗೊತ್ತು'' ಎನ್ನುವ ಮೂಲಕ ಅವರು ರಾಬರ್ಟ್ ವಾದ್ರಾಗೆ ಟಾಂಗ್ ನೀಡಿದರು. ಇದರ ಬೆನ್ನಲ್ಲೇ ರಾಜಸ್ಥಾನದ ಜೈಪುರದಲ್ಲಿಮಾತನಾಡಿದ ರಾಹುಲ್, ``ಮಾವ ಕಾರಣಕ್ಕೂ ಭೂಸ್ವಾಧೀನ ವಿಧೇಯಕದ ಅಂಗೀ ಕಾರಕ್ಕೆ ಅವಕಾಶ ನೀಡುವುದಿಲ್ಲ. ನೋಡಿ, ಇನ್ನು 6 ತಿಂಗಳಲ್ಲಿ ಪ್ರಧಾನಿ ಮೋದಿ ಅವರ 56 ಇಂಚಿನ ಎದೆಯನ್ನು ನಮ್ಮ ಜನ 5.6 ಇಂಚಿಗಿಳಿಸುತ್ತಾರೆ'' ಎಂದರು.
ದಾಮಾದ್‍ಗಳಿಂದ ಸಮಸ್ಯೆ: ಮೋದಿ
- ಡೋಗ್ರಾರದ್ದು ನಿಸ್ವಾರ್ಥ ಸೇವೆ. ಅವರು ವಿತ್ತ ಸಚಿವ ರಾಗಿ 26 ಬಜೆಟ್ ಮಂಡಿಸಿದ್ದಾರೆ. ಆದರೆ ಯಾವತ್ತೂ ತನ್ನ ಕುಟುಂಬ ಸದಸ್ಯರಿಗೆ ಅನುಕೂಲವಾಗುವಂತೆ ಮಾಡಿಲ್ಲ.
- ಡೋಗ್ರಾ ಅವರೊಬ್ಬ ಉತ್ತಮ ಜಡ್ಜ್. ಅವರು ಎಂಥಾ ಅಳಿಯ(ವಿತ್ತ ಸಚಿವ ಜೇಟ್ಲಿ)ನನ್ನು ಆಯ್ಕೆ ಮಾಡಿದ್ದಾರೆ ಎನ್ನುವುದೇ ಇದನ್ನು ಸಾಬೀತುಪಡಿಸುತ್ತದೆ.
- ಇವರಿಬ್ಬರೂ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ರೀತಿ ಯಶಸ್ಸು ಗಳಿಸಿ ದ್ದಾರೆ. ಆದರೆ, ಈಗ ಕೆಲವರಿಗೆ ಅಳಿ ಯಂದಿರಿಂದಾಗಿ ಎಂತೆಂಥ ಮಾತು
- ಗಳು, ಸಮಸ್ಯೆಗಳು ಉಂಟಾಗುತ್ತಿವೆ.
- ರಾಜಕೀಯ ಅಸ್ಪೃಶ್ಯತೆಯನ್ನು ಒಪ್ಪ ಲಾರೆ. ರಾಷ್ಟ್ರೀಯ ಪರಂಪರೆಯನ್ನು ವಿಭಜಿಸಬಾರದು. ದೇಶಕ್ಕಾಗಿ ಕೆಲಸ ಮಾಡಿದ, ಪ್ರಾಣತೆತ್ತ ಎಲ್ಲ ನಾಯಕ ರನ್ನೂ ಅವರ ಸಿದ್ಧಾಂತ ಏನೇ ಆಗಿದ್ದ ರೂ, ನಾವು ಸಮಾನವಾಗಿ ಗೌರವಿಸ ಬೇಕು. (ಡೋಗ್ರಾ 24 ಕ್ಯಾರೆಟ್‍ನ ಕಾಂಗ್ರೆಸ್ಸಿಗ ಎಂಬ ಕಾಂಗ್ರೆಸ್ ನಾಯಕ ಗುಲಾಂ ನಬಿ ಹೇಳಿಕೆಗೆ ಪ್ರತಿಯಾಗಿ ಪ್ರಧಾನಿ ಈ ಮಾತನ್ನಾಡಿದರು).
- ಇಂದು ನಾವೆಲ್ಲರೂ ಇಲ್ಲಿ ಒಟ್ಟಿಗೇ ಕುಳಿತಿದ್ದೇವೆ. ಆದರೆ, ಇನ್ನು ಕೆಲವೇ ದಿನದಲ್ಲಿ ಆಗುವ ಮುಖಾಮುಖಿ, ಕಲಹಗಳನ್ನು ನೀವೇ ನೋಡಿ. ಅದೇನೇ ಇರಲಿ, ವ್ಯತಿರಿಕ್ತತೆಗಳು ಪ್ರಜಾಪ್ರಭು ತ್ವದ ಸೌಂದರ್ಯದ ಸಂಕೇತ.
ಮೋದಿಗೆ ಮಾತೇ ಬರ್ತಿಲ್ಲ: ರಾಹುಲ್
- ಆರೇ ತಿಂಗಳಲ್ಲಿ ರೈತರು, ಕಾರ್ಮಿಕರು ಕಾಂಗ್ರೆಸ್ ಸೇರಿ ಪ್ರಧಾನಿ 56 ಇಂಚಿನ ಎದೆಯನ್ನು 5.6 ಇಂಚಿಗೆ ಇಳಿಸಲಿದೆ.
- ಇಲ್ಲಿರುವುದು ರಾಜೇ ಸರ್ಕಾರವಲ್ಲ, ಲಲಿತ್ ಮೋದಿ ಸರ್ಕಾರ.ಮಧ್ಯಪ್ರದೇಶದಲ್ಲಿ ವ್ಯಾಪಂ ಸರ್ಕಾರ, ಮಹಾ ರಾಷ್ಟ್ರದಲ್ಲಿ ಮುಂಡೆ ಸರ್ಕಾರ. ಆದರೂ 56 ಇಂಚಿನವರು ಮಾತೇ ಆಡುತ್ತಿಲ್ಲ.