ದೇಶ

ಗಿಲಾನಿ ಗೃಹ ಬಂಧನ: ಕಣಿವೆ ರಾಜ್ಯದಲ್ಲಿ ಬೆಂಬಲಿಗರಿಂದ ಪುಂಡಾಟ, ಭುಗಿಲೆದ್ದ ಹಿಂಸಾಚಾರ

Vishwanath S

ಜಮ್ಮು ಮತ್ತು ಕಾಶ್ಮೀರ: ಈದ್ ಪ್ರಾರ್ಥನೆಯಲ್ಲಿ ಭಾಗಿಯಾಗಲು ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಮತ್ತು ಮುಹಮ್ಮದ್ ಯಾಸೀನ್ ಮಲ್ಲಿಕ್ ಗೆ ನಿರ್ಬಂಧಿಸಿ ಗೃಹ ಬಂಧನವನ್ನು ಮುಂದುವರಿಸಿದ್ದನ್ನು ವಿರೋಧಿಸಿ ಕಣಿವೆ ರಾಜ್ಯದಲ್ಲಿ ಗಿಲಾನಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಗಿಲಾನಿ ಬೆಂಬಲಿಗರು ತಮ್ಮ ಪುಂಡಾಟಿಕೆಯನ್ನು ಮುಂದುವರೆಸಿದ್ದು, ಪೊಲೀಸರ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಸದ್ಯ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಶ್ರೀನಗರ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಪ್ರತಿಭಟನೆಗಿಳಿದ ಗಿಲಾನಿ ಬೆಂಬಲಿಗರು ಪಾಕಿಸ್ತಾನ ಬಾವುಟ ಸೇರಿದಂತೆ ಉಗ್ರ ಸಂಘಟನೆಗಳಾದ ಐಎಸ್ಐಎಸ್, ಲಷ್ಕರ್ ಸಂಘಟನೆ ಬಾವುಟಗಳ ಹಾರಾಟವನ್ನೂ ಹಾರಿಸಿದ್ದಾರೆ. ಇದೇ ವೇಳೆ ಅನಂತ್ ನಾಗ್ ಜಿಲ್ಲೆಯಲ್ಲೂ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಪ್ರಾರ್ಥನೆ ಬಳಿಕ ಇಸಿಸ್, ಲಷ್ಕರ್ ಸಂಘಟನೆಯ ಬಾವುಟ ಹಾರಾಡಿಸಿದ್ದಾರೆ.

SCROLL FOR NEXT