ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ತಂದೆ (ಸಾಂದರ್ಭಿಕ ಚಿತ್ರ) 
ದೇಶ

ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ತಂದೆ

ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಆಟವಾಡಿಕೊಂಡಿದ್ದ ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ವಿಕೃತ ಘಟನೆಯೊಂದು ಮದುರೈನ ಕಲ್ಲಿಕುಡಿ ಪ್ರದೇಶದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

ಮದುರೈ: ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಆಟವಾಡಿಕೊಂಡಿದ್ದ ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ವಿಕೃತ ಘಟನೆಯೊಂದು ಮದುರೈನ ಕಲ್ಲಿಕುಡಿ ಪ್ರದೇಶದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೀಲೈಕಾರಿ(37), ಪೆರಿಸ್ವಾಮಿ (42) ಎಂಬ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ನಾಗೇಂದ್ರನ್ (10) ಎಂಬ ಒಬ್ಬ ಗಂಡಮಗನಿದ್ದು, ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪತ್ನಿ ನೆರೆಮನೆಯಾತನೊಂದಿಗೆ ಸಂಬಂಧ ಹೊಂದಿದ್ದಾಳೆಂಬ ಶಂಕೆ ಪೆರಿಸ್ವಾಮಿಗೆ ಬಂದಿದೆ. ಹೀಗಾಗಿ ಹಲವು ಬಾರಿ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಸೀಲೈಕಾರಿ ಅಕ್ರಮ ಸಂಬಂಧ ಮುಂದುವರೆಸುತ್ತಿದ್ದಾಳೆಂಬ ಶಂಕೆಯಿಂದಾಗಿ ಪೆರಿಸ್ವಾಮಿ ಈ ಹತ್ಯೆ ಮಾಡಿದ್ದಾನೆಂದು ಹೇಳಲಾಗುತ್ತಿದೆ.

ನಾಗೇಂದ್ರನ್ (10) ಬಾಲಕ ಸ್ಥಳೀಯ ಶಾಲೆಯೊಂದರಲ್ಲಿ 5ನೇ ತರಗತಿ ಓದುತ್ತಿದ್ದು, ಜು.21 ರಂದು ಕಾರಣನಾಂತರಗಳಿಂದ ಶಾಲೆಗೆ ಹೋಗದೆ ತಾಯಿಯೊಂದಿಗೆ ಹಸು ಮೇಯಿಸಲು ಹೋಗಿದ್ದಾನೆ. ಸಂಜೆ 4ರ ಹೊತ್ತಿಗೆ ತಾಯಿ ಸೀಲೈಕಾರಿ ಹಾಗೂ ಮಗ ನಾಗೇಂದ್ರನ್ ಇಬ್ಬರೂ ಮನೆಗೆ ಬಂದಿದ್ದಾರೆ. ನಂತರ ವಿಶ್ರಾಂತಿ ಪಡೆಯಲೆಂದು ಸೀಲೈಕಾರಿ ಮಲಗಿಕೊಂಡಿದ್ದಾಳೆ. ಈ ವೇಳೆ ಇದ್ದಕ್ಕಿದ್ದಂತೆ ಕೆಂಡಾಮಂಡಲದ ಸ್ಥಿತಿಯಲ್ಲಿ ಬಂದ ಪೆರಿಸ್ವಾಮಿ ಇದ್ದಕ್ಕಿದ್ದಂತೆ ಪತ್ನಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಆಟವಾಡಿಕೊಂಡಿದ್ದ ನಾಗೇಂದ್ರನ್ ತಾಯಿಗೆ ಹೊಡೆಯುತ್ತಿದ್ದ ತಂದೆಯನ್ನು ಕಂಡು ಮಧ್ಯೆ ಪ್ರವೇಶಿಸಿದ್ದಾನಾದರೂ ಕೋಪದಲ್ಲಿದ್ದ ಪೆರಿಸ್ವಾಮಿ ಮಗನಿಗೂ ಹೊಡೆದು ಮಧ್ಯೆ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ.

ತಂದೆಯ ರೌದ್ರಾತಾರವನ್ನು ಕಂಡ ನಾಗೇಂದ್ರನ್ ಗೆ ಭಯಭೀತನಾಗಿದ್ದಾನೆ. ನಂತರ ಮಾರಾಕಾಸ್ತ್ರಗಳನ್ನು ತೆಗೆದುಕೊಂಡ ಪೆರಿಸ್ವಾಮಿ ಸೀಲೈಕಾರಿ ಅವರ ತಲೆ ಕತ್ತರಿಸಿದ್ದಾನೆಂದು ನಾಗೇಂದ್ರನ್ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೆರಿಸ್ವಾಮಿಯನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ತನ್ನ ಎದುರೇ ತಾಯಿಯನ್ನು ಹತ್ಯೆ ಮಾಡಿದ ತಂದೆಯನ್ನು ಕಂಡ ಮಗ ನಾಗೇಂದ್ರನ್ ಇದೀಗ ಆಘಾತಕ್ಕೊಳಗಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!