ನವದೆಹಲಿ: ಭಾರತದ ತನಗೆ ಕೊಡಬೇಕಾಗಿರುವ ರು. 41 ಸಾವಿರ ಕೋಟಿ ಮೊತ್ತವನ್ನು ತಕ್ಷಣವೇ ನೀಡಬೇಕಾಗಿಲ್ಲ. ಆ ಮೊತ್ತವನ್ನು ಭಾರತದಲ್ಲಿನ ಯೋಜನೆಗಳಿಗೆ ಹೂಡಿಕೆ
ಮಾಡುವುದಾಗಿ ಇರಾನ್ ತಿಳಿಸಿದೆ.
ಈ ನಿರ್ಧಾರದಿಂದಾಗಿ ಕೇಂದ್ರ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಆರೋಪ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಅದರ ಮೇಲೆ ನಿಷೇಧ ಹೇರಿತ್ತು. ಹೀಗಾಗಿ, ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಇರಾನ್‍ನಿಂದ ಕಚ್ಚಾ ತೈಲ ಖರೀದಿ ಮಾಡಿದರೂ, ಬಾಕಿ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ನಿಷೇಧ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರ ಸುಲಭಗೊಂಡಿದೆ.