ನವದೆಹಲಿ: ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯದಲ್ಲಿ ನಲ್ಲಿ ತಾನು ಮಾಡಿದ ಭಾಷಣಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಮ್ರತೆ ನನ್ನ ಮನ ಮುಟ್ಟಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಮೋದಿ ಒಬ್ಬ ಉತ್ತಮ ವಾಗ್ಮಿ ಆಗಿರುವುದರಿಂದಲೇ ಅವರಿಗೆ ನನ್ನ ಭಾಷಣವನ್ನು ಪ್ರಶಂಸೆ ಮಾಡಲು ಸಾಧ್ಯವಾಯಿತು.
ಅದೇ ವೇಳೆ ಒಂದು ರಾಜಕೀಯ ಪಕ್ಷದ ಚೌಕಟ್ಟನಿಂದ ಹೊರಗೆ ನಿಂತು ಇನ್ನೊಬ್ಬರ ಬಗ್ಗೆ ಮೆಚ್ಚುಗೆ ಸೂಚಿಸುವುದು ಒಳ್ಳೆಯ ಕಾರ್ಯವಾಗಿದೆ. ಮಾತ್ರವಲ್ಲ ಪ್ರಧಾನಿ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವುದನ್ನು ಪ್ರಧಾನಿಯ ವಿನಯವಂತಿಕೆ ಎಂದು ಮಾತ್ರ ಪರಿಗಣಿಸಿದರೆ ಸಾಕು ಎಂದು ತರೂರ್ ಹೇಳಿದ್ದಾರೆ.