ಐಯುಎಂಎಲ್ ಮುಖ್ಯಸ್ಥ ಮತ್ತು ಸಂಸದ ಇಟಿ ಬಷೀರ್ 
ದೇಶ

ಕೋರ್ಟ್‍ಗಳು ನಂಬಿಕೆ ಬಗ್ಗೆ ಮಾತನಾಡುವುದು ಬೇಡ: ಐಯುಎಂಎಲ್

ಅಖಿಲ ಭಾರತ ವೈದ್ಯಕೀಯಪೂರ್ವ ಪರೀಕ್ಷೆಯಲ್ಲಿ ಪಾಲಿಸಲಾದ ವಸ್ತ್ರಸಂಹಿತೆಯ ಬಗೆಗಿನ ಸುಪ್ರೀಂಕೋರ್ಟ್ ನಿಲುವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಟುವಾಗಿ ವಿರೋಧಿಸಿದೆ.

ನವದೆಹಲಿ: ಅಖಿಲ ಭಾರತ ವೈದ್ಯಕೀಯಪೂರ್ವ ಪರೀಕ್ಷೆಯಲ್ಲಿ ಪಾಲಿಸಲಾದ ವಸ್ತ್ರಸಂಹಿತೆಯ ಬಗೆಗಿನ ಸುಪ್ರೀಂಕೋರ್ಟ್ ನಿಲುವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಟುವಾಗಿ ವಿರೋಧಿಸಿದೆ.
ಶುಕ್ರವಾರದಂದು ನಡೆದ ಎಐಪಿಎಂಟಿ ಮುಸ್ಲಿಂ ಅಭ್ಯರ್ಥಿಗಳಿಗೆ ಪರೀಕ್ಷೆ ಕೊಠಡಿಯೊಳಗೆ ಒಳಗೆ ತಲೆವಸ್ತ್ರ ಬಳಸಲು ಅನುಮತಿ ನೀಡದ ನಿಯಮಕ್ಕೆ ಸುಪ್ರೀಂಕೋಟ್ ಸಹಮತ  ವ್ಯಕ್ತಪಡಿಸಿದ್ದಲ್ಲದೆ ಪರೀಕ್ಷಾ ಕೊಠಡಿಯೊಳಗೆ ತಲೆವಸ್ತ್ರ ಧರಿಸದಿದ್ದರೆ, ನಿಮ್ಮ ಧಾರ್ಮಿಕನಂಬಿಕೆಗಳೇನೂ ನಾಶವಾಗುವುದಿಲ್ಲ ಎಂದು ಹೇಳಿತ್ತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇರಳದ ಐಯುಎಂಎಲ್ ನಾಯಕ, ಸಂಸದ ಇ. ಟಿ. ಬಷೀರ್ ಸುಪ್ರೀಂ ಕೋರ್ಟ್‍ಗೆ ಮಾತ್ರವಲ್ಲ, ಯಾರಿಗೂ ಧಾರ್ಮಿಕ ನಂಬಿಕೆಗಳ ಕುರಿತು ಮಾತನಾಡುವ ಹಕ್ಕಿಲ್ಲ. ಇದು ಸಾಮಾನ್ಯ ವಿಷಯವಲ್ಲ. ಕೋರ್ಟ್ ತೀರ್ಪು ಧಾರ್ಮಿಕ ನಂಬಿಕೆಗಳ ವಿರುದ್ಧ ಬಂದಿದೆ.' ಎಂದು ಪ್ರತಿಭಟಿಸಿದ್ದಾರೆ.
ಇದೇ ವೇಳೆ ಬಷೀರ್ ಮಾತಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮುರಳೀಧರನ್ ಈ ದೇಶದಲ್ಲಿ ಅವರು ಇದ್ದಾರೆಂದ ಮೇಲೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲೇಬೇಕು. ಇಲ್ಲವಾದಲ್ಲಿ ದೇಶ ತೊರೆದು ಹೋಗಬೇಕು' ಎಂದು ತಿರುಗೇಟು ನೀಡಿದ್ದಾರೆ.ಸಂವಿಧಾನಕ್ಕೆ ಹಾಗೂ ಸುಪ್ರೀಂಕೋರ್ಟ್‍ಗೆ ಅಪಚಾರ ಎಸಗುವ ಕೆಲಸವಾಗಿದೆ ಎಂಬುದು ಅವರ ವಾದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!