ದೇಶ

ಉಗ್ರರ ದಾಳಿ: ತಂದೆಯಂತೆಯೇ ಪ್ರಾಣತೆತ್ತ ಪಂಜಾಬ್ ಎಸ್.ಪಿ ಬಲ್ಜಿಂದರ್ ಸಿಂಗ್!

Srinivas Rao BV

ಪಂಜಾಬ್: ಪಂಜಾಬ್ ನ ಎಸ್.ಪಿ ಬಲ್ಜಿತ್ ಸಿಂಗ್ ತನ್ನ ತಂದೆಯಂತೆಯೇ ಉಗ್ರರೊಂದಿಗಿನ ಕಾಳಗದಲ್ಲಿ ಮೃತಪಟ್ಟಿದ್ದಾರೆ.

ಪಂಜಾಬ್ ನಲ್ಲಿ ನಡೆದ ಉಗ್ರರು ಸೇನೆ ನಡುವಿನ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿರುವ ಎಸ್.ಪಿ ಬಲ್ಜಿತ್ ಸಿಂಗ್ ತಂದೆ ಅಚ್ಹರ್ ಸಿಂಗ್ ಸಹ ಉಗ್ರರೊಂದಿಗಿನ ಕಾಳಗದಲ್ಲಿ ಮರಣಹೊಂದಿದ್ದರು. 1984 ರಲ್ಲಿ ಉಗ್ರರು ಯೋಜಿಸಿದ್ದ ರಸ್ತೆ ಅಪಘಾತಕ್ಕೆ ಅಚ್ಹರ್ ಸಿಂಗ್ ಬಲಿಯಾಗಿದ್ದರು. ತನ್ನ ತಂದೆ ನಿಧನರಾಗಿದ್ದರಿಂದ ಒಂದು ವರ್ಷದಲ್ಲಿ(1985 ) ರಲ್ಲಿ ಬಲ್ಜಿತ್ ಸಿಂಗ್, ಎ.ಎಸ್.ಐ ಆಗಿ  ಇಲಾಖೆಗೆ  ಸೇರ್ಪಡೆಗೊಂಡಿದ್ದರು.

ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ನಂತರ  ಬಲ್ಜಿತ್ ಸಿಂಗ್ ಫಗ್ವಾರದ ಎಸ್.ಹೆಚ್.ಒ ಆಗಿ, ಮಾನ್ಸಾದ ವಿಜಿಲೆನ್ಸ್ ವಿಭಾಗದಲ್ಲೂ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ 7 ನೇ ಐ.ಆರ್.ಬಿ ಬೆಟಾಲಿಯನ್ ನ ಉಪ ಕಮಾಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಬಲ್ಜಿತ್ ಸಿಂಗ್ ನಿವಾಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಗೌರವ ಸಲ್ಲಿಸಿದ್ದಾರೆ. ಬಲ್ಜಿತ್ ಸಿಂಗ್ ಪತ್ನಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಬಲ್ಜಿತ್ ಸಿಂಗ್ ಮೃತಪಟ್ಟಿರುವ ವಿಷಯವನ್ನು ಆಕೆಗೆ ತಿಳಿಸದಂತೆ ಕುಟುಂಬ ಸದಸ್ಯರು ಎಸ್.ಎಸ್.ಪಿ ಆಶೀಶ್ ಚೌಧರಿಗೆ ಮನವಿ ಮಾಡಿದ್ದಾರೆ. ಹುತಾತ್ಮ ಅಧಿಕಾರಿ ಬಲ್ಜಿತ್ ಸಿಂಗ್  ಪುತ್ರ ಮನೀಂದರ್ ಸಿಂಗ್, ಪುತ್ರಿ ಪರ್ಮಿಂದರ್ ಕೌರ್, ರವಿಂದರ್ ಕೌರ್ ನ್ನು ಅಗಲಿದ್ದಾರೆ. ನಾಳೆ ಬಲ್ಜಿತ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಲಿದೆ.

SCROLL FOR NEXT