ದೇಶ

ಕನಸಿನ ಪುಸ್ತಕ ಬರೆದು ಮುಗಿಸುವ ಮುನ್ನವೇ ಮರೆಯಾದ ಕಲಾಂ

Srinivas Rao BV

ಚೆನ್ನೈ: ಸದಾಕಾಲ ಭಾರತದ ಅಭಿವೃದ್ಧಿಯ ಬಗ್ಗೆಯೇ ಚಿಂತನೆ ನಡೆಸುತ್ತಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ತಮ್ಮ ಕನಸಿನ ಪುಸ್ತಕ ಪ್ರಕಟಗೊಳ್ಳುವುದಕ್ಕೂ ಮುನ್ನವೇ ಮರೆಯಾಗಿದ್ದಾರೆ.

ತವರು ರಾಜ್ಯ ತಮಿಳುನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದ ಅವರು, ಭಾರತದ ಅಭಿವೃದ್ಧಿಗಾಗಿ ವಿಷನ್ 2020 ರಂತೆಯೇ ತಮಿಳುನಾಡಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳಿಯ ಭಾಷೆಯಲ್ಲೇ ಪುಸ್ತಕವೊಂದನ್ನು ಬರೆಯುತ್ತಿದ್ದರು. ಆದರೆ ಸಂಪೂರ್ಣವಾಗುವುದಕ್ಕೂ ಮುನ್ನವೇ ಇಹ ಲೋಕ ತ್ಯಜಿಸಿದ್ದಾರೆ.

ತಮಿಳುನಾಡಿನ ಬೆಳವಣಿಗೆಗೆ ಅಗತ್ಯವಿರುವ ಅಂಶಗಳ ಬಗ್ಗೆ ಬರೆಯಲು ಪ್ರಾರಂಭಿಸಿದ್ದ ಪುಸ್ತಕದ ಏಳು ಅಧ್ಯಾಯಗಳನ್ನು ಪೂರ್ಣಗೊಳಿಸಿದ್ದ ಕಲಾಂ, ಕೊನೆಯ ದಿನಗಳವರೆಗೂ ತಮಿಳುನಾಡಿನ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಉಪಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದರು ಎಂದು ಕಲಾಂ ಅವರ ನಿಕಟವರ್ತಿ ಹೇಳಿದ್ದಾರೆ.

"ಮನಸ್ಸಿನಲ್ಲಿ ಒಳ್ಳೆತನ ಇದ್ದರೆ ಕನಸಿನ ತಮಿಳುನಾಡು ಉದಯಿಸುತ್ತದೆ, ಚಂಡಮಾರುತ ಸರಿದು ತಂಗಾಳಿ ಬೀಸುತ್ತದೆ". ಎಂಬ ಪುಸ್ತಕದಲ್ಲಿ ಏಳು ಅಧ್ಯಾಯಗಳನ್ನು ಪೂರ್ಣಗೊಳಿಸಲಾಗಿತ್ತು. ಪುಸ್ತಕದ ಬಗ್ಗೆ ಕೊನೆಯದಾಗಿ ಜು.23 ರಂದು ಅವರು ನನ್ನೊಂದಿಗೆ ಚರ್ಚಿಸಿದ್ದರು, ಅಭಿವೃದ್ಧಿ ಹೊಂದಿದ ತಮಿಳುನಾಡು ಅವರ ಕನಸಾಗಿತ್ತು ಎಂದು ಕಲಾಂ ಅವರ ವೈಜ್ಞಾನಿಕ ಸಲಹೆಗಾರ ಹಾಗೂ ಪುಸ್ತಕದ ಸಹ ಲೇಖಕ ವಿ ಪೊನ್ರಾಜ್ ಹೇಳಿದ್ದಾರೆ.

SCROLL FOR NEXT