ಮೆಮನ್ಗೆ ಗಲ್ಲು ವಿಧಿಸಿದ ಮಾದರಿಯಲ್ಲಿಯೇ ಇತರೆ ಉಗ್ರರನ್ನು ಗಲ್ಲಿಗೇರಿಸಲಿ: ದಿಗ್ವಿಜಯ್ ಸಿಂಗ್
ಮುಂಬೈ ಸರಣಿ ಬಾಂಬ್ ಸ್ಪೋಟದ ರುವಾರಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ವಿಧಿಸಿದ ಮಾದರಿಯಲ್ಲಿಯೇ ಬಾಂಬ್ ಸ್ಪೋಟದ...
ನವದೆಹಲಿ: ಮುಂಬೈ ಸರಣಿ ಬಾಂಬ್ ಸ್ಪೋಟದ ರುವಾರಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ವಿಧಿಸಿದ ಮಾದರಿಯಲ್ಲಿಯೇ ಬಾಂಬ್ ಸ್ಪೋಟದ ಇತರೆ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
ಯಾಕೂಬ್ ಮೆಮನ್ಗೆ ಗಲ್ಲಿ ಶಿಕ್ಷೆ ವಿಧಿಸಲು ತೋರಿದ ಬದ್ಧತೆಯನ್ನು ಉಳಿದ ಉಗ್ರರ ವಿಚಾರದಲ್ಲಿಯೂ ತೋರಬೇಕು, ಈ ಕುರಿತು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯ ಮುಂದಾಗುವ ಅಗತ್ಯವಿದೆ. ಮೆಮನ್ ಗಲ್ಲು ಶಿಕ್ಷೆ ವಿಧಿಸಿದ ರೀತಿಯಲ್ಲೇ ಇನ್ನುಳಿದಂತಾ ಎಲ್ಲಾ ಭಯೋತ್ಪಾದನ ಪ್ರಕರಣಗಳಿಗೂ ಅನ್ವಯವಾಗಬೇಕು. ಇದೇ ರೀತಿಯ ಆತುರ ಆ ಪ್ರಕರಣಗಳಲ್ಲೂ ಇರಬೇಕು ಎಂದು ಹೇಳಿದ್ದಾರೆ.
ಯಾವುದೇ ಧರ್ಮದಲ್ಲಿನ ಉಗ್ರರಿಗೂ ಇದೇ ರೀತಿ ಮಾಡುವ ಬದ್ದತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕು. ಉಗ್ರರ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.