ತ್ರಿಪುರದ ರಾಜ್ಯಪಾಲ ತಥಾಗತ ರಾಯ್ 
ದೇಶ

ಯಾಕೂಬ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಉಗ್ರರಾಗಿರಬಹುದು: ತ್ರಿಪುರ ರಾಜ್ಯಪಾಲ

ಗಲ್ಲು ಶಿಕ್ಷೆಗೆ ಗುರಿಯಾದ ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಭಯೋತ್ಪದಕರಾಗಿರಬಹುದು...

ತ್ರಿಪುರ: ಗಲ್ಲು ಶಿಕ್ಷೆಗೆ ಗುರಿಯಾದ ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಭಯೋತ್ಪದಕರಾಗಿರಬಹುದು ಎಂದು ಹೇಳುವ ಮೂಲಕ ತ್ರಿಪುರದ ರಾಜ್ಯಪಾಲ ತಥಾಗತ ರಾಯ್ ವಿವಾದಕ್ಕೀಡಾಗಿದ್ದಾರೆ.

1993 ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ನ್ನು ನಿನ್ನೆ ಗಲ್ಲಿಗೇರಿಸಿದ ನಂತರ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೆಮನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ್ದವರಲ್ಲಿ ಭಯೋತ್ಪಾದಕರೂ ಇರುವ ಸಾಧ್ಯತೆ ಇದೆ ಹಾಗಾಗಿ, ಅವರ ಮೇಲೆ ನಿಗಾ ಇಡಿ ಎಂದು ತಥಾಗತ ರಾಯ್ ಹೇಳಿದ್ದರು.

ಗುಪ್ತಚರ ಇಲಾಖೆಯವರು ಮೆಮನ್ ಸಂಬಂಧಿಕರು ಮತ್ತು ಆಪ್ತರನ್ನು ಬಿಟ್ಟ ಬೇರೆ ಯಾರೆಲ್ಲ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರೋ ಅಂತಹವರ ಮೇಲೆ ಒಂದು ಕಣ್ಣು ಇಡುವುದು ಒಳ್ಳೆಯದು ಎಂದು ರಾಯ್ ಟ್ವೀಟ್ ಮಾಡಿದ್ದರು.

ರಾಜ್ಯಪಾಲರ ಈ ಹೇಳಿಕೆಗೆ ಟ್ವಿಟರ್ ನಲ್ಲಿ ಟೀಕೆ ಹೆಚ್ಚಾಗುತ್ತಿದ್ದಂತೆ, ಭದ್ರತೆ ದೃಷ್ಟಿಯಿಂದ ನಾನು ಈ ಹೇಳಿಕೆ ನೀಡಿದೆ. ರಾಜ್ಯದ ಭದ್ರತೆ ಬಗ್ಗೆ ಕಾಳಜಿವಹಿಸುವುದು ರಾಜ್ಯಪಾಲರು ಜವಾಬ್ದಾರಿಯಾಗಿರುತ್ತದೆ. ಪೊಲೀಸರು ಯಾಕೂಬ್ ಸಾವಿನ ಶೋಕತಪ್ತರ ಮೇಲೆ ನಿಗಾ ಇಡುವುದರಿಂದ ಮುಂದಾಗವ ಭಯೋತ್ಪಾದನೆಯನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಇದಕ್ಕೆ, ರಾಜ್ಯಪಾಲರು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಈ ಹೇಳಿಕೆ ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು ವ್ಯಕ್ತವಾದವು. ಮತ್ತೆ ಪ್ರತಿಕ್ರಯಿಸಿದ ರಾಜ್ಯಪಾಲರು, ಇಲ್ಲಿ ನಾನು ಯಾವುದೇ ಸಮುದಾಯದ ಮೇಲೆ ನಿಗಾ ಇಡು ಎಂದು ಹೇಳಿಲ್ಲ. ಹಾಗಾಗಿ, ನನಗೇಕೆ ಅಪರಾಧ ಪ್ರಜ್ಞೆ ಕಾಡಬೇಕು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT