ರಿಷಿಕೇಶ್: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆನನ್ ಸಾವಿಗೆ ಶೋಕಾಚಾರಣೆ ಮಾಡುವವರೆಲ್ಲ 'ರಾಷ್ಟ್ರ ವಿರೋಧಿಗಳು' ಅವರಿಗೆ ಭಾರತೀಯ ಸಂವಿಧಾನದ ಬಗ್ಗೆ ಗೌರವವಿಲ್ಲ. ಹೀಗಾಗಿ ಅವರೆಲ್ಲ ಪಾಕಿಸ್ತಾನಕ್ಕೆ ತೊಲಗಲಿ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾಕೂಬ್ ಮೆನನ್ ಗೆ ಗಲ್ಲು ಶಿಕ್ಷೆ ತಪ್ಪಿಸಲು ಯತ್ನಿಸಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದ ರಾಜಕೀಯ ಮುಖಂಡರೆಲ್ಲ ರಾಷ್ಟ್ರ ವಿರೋಧಿಗಳು ಎಂದು ಕಿಡಿಕಾರಿದ್ದಾರೆ.
ಸರಣಿ ಸ್ಫೋಟದಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಸಂದರ್ಭದಲ್ಲೂ ಈ ಕಾರ್ಯವನ್ನು ಮಾಡಿಲ್ಲ. ಆದರೆ ಒಬ್ಬ ಅಪರಾಧಿಯನ್ನು ರಕ್ಷಿಸಲು ಮಾತ್ರ ಏನೆಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಸಾಕ್ಷಿ ಮಹಾರಾಜ್ ಕೋಮು ಪ್ರಚೋಧನಕಾರಿ ಹೇಳಿಕೆಯನ್ನು ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ದೇಶದ್ರೋಹಿಯಾಗಿರುವ ಯಾಕೂಬ್ ಮೆನನ್ ಪರ ಸಹಾನುಭೂತಿ ಹೊಂದಿದ್ದವರಿಗೆ ಕಲಾಳಮೋಕ್ಷ ಮಾಡಬೇಕು. ಭಾರತ ಸಂವಿಧಾನದಲ್ಲಿ ಗೌರವ ಇಲ್ಲದವರೂ ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೊಲಗಲಿ ಎಂದು ಮಹಾರಾಜ್ ಹೇಳಿದ್ದಾರೆ.