ಏರ್ ಇಂಡಿಯಾ ಸಿಬ್ಬಂದಿಗೆ ಯೋಗಾಭ್ಯಾಸ 
ದೇಶ

ಏರ್‍ಇಂಡಿಯಾ ಹೊಸ ಸಿಬ್ಬಂದಿ, ಪೈಲಟ್‍ಗಳಿಗೆ ಕಡ್ಡಾಯ ಯೋಗ

ಯೋಗಾಭಿಮಾನಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಬಗೆಗಿನ ತಮ್ಮ ಒಲವನ್ನು ಈಗ ಏರ್‍ಇಂಡಿಯಾದ ಪೈಲಟ್‍ಗಳಿಗೂ ಹಸ್ತಾಂತರಿಸಿದ್ದಾರೆ.

ನವದೆಹಲಿ: ಯೋಗಾಭಿಮಾನಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಬಗೆಗಿನ ತಮ್ಮ ಒಲವನ್ನು ಈಗ ಏರ್‍ಇಂಡಿಯಾದ ಪೈಲಟ್‍ಗಳಿಗೂ ಹಸ್ತಾಂತರಿಸಿದ್ದಾರೆ.

ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾಗೆ ಹೊಸದಾಗಿ ಆಯ್ಕೆಯಾದ ಸಿಬ್ಬಂದಿಗೆ ಯೋಗಾಭ್ಯಾಸ ಕಡ್ಡಾಯ ಮಾಡಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಸದ್ಯ ತರಬೇತಿ ಪಡೆಯುತ್ತಿರುವ ಪೈಲಟ್ ಗಳು ಮತ್ತು ವಿಮಾನ ಸಿಬ್ಬಂದಿ ಸೋಮವಾರದಿಂದ ಪ್ರತಿದಿನ ಬೆಳಗ್ಗೆ 6.30ಕ್ಕೆ ಯೋಗ ಮಾಡಲೇಬೇಕು ಎಂದು ಸೂಚಿಸಲಾಗಿದೆ. ಒತ್ತಡವನ್ನು ನಿಯಂತ್ರಿಸಲು ಇದು ನೆರವಾಗಲಿದೆ ಎನ್ನುವುದು ವೈಮಾನಿಕ ಸಂಸ್ಥೆಯ ಅಭಿಪ್ರಾಯ. ಏರ್‍ಇಂಡಿಯಾವು ಇಂತಹುದೊಂದು ಕ್ರಮಕ್ಕೆ ಮುಂದಾಗಿರುವುದು ಇದೇ ಮೊದಲು.

ಇತ್ತೀಚೆಗಷ್ಟೇ ಸಂಸ್ಥೆಯು 300 ಸಿಬ್ಬಂದಿ ಮತ್ತು 78 ಪೈಲಟ್‍ಗಳನ್ನು ನೇಮಕ ಮಾಡಿದ್ದು, ಅವರಿಗೆ ಹೈದರಾಬಾದ್ ನಲ್ಲಿರುವ ಏರ್‍ಇಂಡಿಯಾ ಕೇಂದ್ರೀಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಇದೇ ವೇಳೆ, ಜನರಲ್ ಮ್ಯಾನೇಜರ್ ಸೇರಿದಂತೆ ಏರ್‍ಇಂಡಿಯಾದ ಹಿರಿಯ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲಿವಿಂಗ್‍ನಲ್ಲಿ 2 ದಿನಗಳ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ.

ಪ್ರಧಾನಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಈ ನಡುವೆ, ಜೂ.21ರಂದು ನವದೆಹಲಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಯೋಗಾಭ್ಯಾಸ
ಮಾಡಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಈ 35 ನಿಮಿಷಗಳ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಲಿದ್ದು, 35 ಸಾವಿರ  ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಹಿರಿಯ ನಾಗರಿಕ ಸೇವಾ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಜತೆಗೆ, ಸೂಕ್ತ ಯೋಗಾಸನಗಳನ್ನು ಮಾಡಲು ನೆರವಾಗುವಂತೆ ಈಗಾಗಲೇ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ಡಿವಿಡಿಗಳು ಮತ್ತು ಪುಸ್ತಿಕೆಗಳನ್ನು ಕಳುಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel