ಬರಿಪಡ: ಭಾರತೀಯ ವಾಯುಪಡೆಗೆ ಸೇರಿದ ಅತ್ಯಾಧುನಿಕ ತರಬೇತಿ ನಿರತ ಯುದ್ಧ ವಿಮಾನವೊಂದು ಬುಧವಾರ ಒಡಿಶಾದ ಮಯುರಭಂಜ್ ಜಿಲ್ಲೆಯ ಕುದರ್ಶಿ ಬಳಿ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆ.
ವಿಮಾನ ಪತನಗೊಳ್ಳುವ ಮುನ್ನವೇ ಎಚ್ಚೆತ್ತುಕೊಂಡ ಪೈಲಟ್‌ಗಳು ವಿಮಾನದಿಂದ ಕೆಳಗೆ ಜಿಗಿದಿದ್ದಾರೆ. ಗಾಯಗೊಂಡ ಪೈಲಟ್‌ಗಳ ಒಬ್ಬರು ಸಚಿನ್ ಎಂದು ಗುರುತಿಸಲಾಗಿದೆ.
ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿಸೋಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುದ್ಧ ವಿಮಾನವೊಂದು ಪತನವಾಗಿದೆ ಎಂಬ ಮಾಹಿತಿ ನಮಗೆ ಬಂದಿದೆ ಎಂದು ಒಡಿಶಾ ಡಿಜಿಪಿ ಸಂಜೀವ್ ಮರಿಕ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.