ಚಂದೇಲ್: ಶಸ್ತ್ರ ಸಜ್ಜಿತ ಉಗ್ರರು ಮನಬಂದಂತೆ ನಡೆಸಿದ ದಾಳಿಗೆ 20 ಸೈನಿಕರು ಸಾವನ್ನಪ್ಪಿ 16 ಮಂದಿ ಗಾಯಗೊಂಡಿರುವ ಘಟನೆ ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ನಡೆದಿದೆ, ಈ ವೇಳೆ 12 ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ,
ಮೋಟುಲ್ ಎಂಬ ಪ್ರದೇಶದಿಂದ ಇಂಪಾಲ ಕಡೆಗೆ 6ಡೋಗ್ರಾ ರೆಜಿಮೆಂಟ್ ಸೈನಿಕರು, ಇಂದು ಬೆಳಗ್ಗೆ 8.45 ರ ಸಮಯದಲ್ಲಿ ಬರುತ್ತಿದ್ದ ವೇಳೆ, ಅವಿತು ಕುಳಿತಿದ್ದ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ.
ನಿನ್ನೆ ಮಹಿಳೆ ಅಸ್ಸಾಂ ನ ತಂಡವೊಂದು ಮಹಿಳೆಯನ್ನು ದರೋಡೆ ಮಾಡಿ ಕೊಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಚಂದೇಲ್ ನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಅಘೋಷಿತ ಬಂದ್ ಆಚರಿಸಲಾಗಿತ್ತು. ಇನ್ನು ಇದುವರೆಗೂ ಯಾವುದೇ ಸಂಘಟನೆಗಳು ದಾಳಿಯ ಹೊಣೆಹೊತ್ತಿಲ್ಲ.