ಏರ್ ಇಂಡಿಯಾ ವಿಮಾನ 
ದೇಶ

ಚಿನ್ನ 'ಕಳ್ಳಸಾಗಣೆ' ಆರೋಪ;ಏರ್ ಇಂಡಿಯಾ ವಿಮಾನ ಸಿಬ್ಬಂದಿ ಬಂಧನ

ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿಯನ್ನು ಜೆದ್ದಾ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ...

ನವದೆಹಲಿ: ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿಯನ್ನು ಜೆದ್ದಾ ವಿಮಾನ ನಿಲ್ದಾಣದ ಅಧಿಕಾರಿಗಳು  ಬಂಧಿಸಿದ್ದಾರೆ.

ಬಂಧಿತ ಸಿಬ್ಬಂದಿ ಇತರ 11 ಮಂದಿ ಸಿಬ್ಬಂದಿಗಳ ಜತೆ ಕೊಚ್ಚಿಗೆ ತೆರಳಬೇಕಿದ್ದ ವಿಮಾನಕ್ಕೆ ಹತ್ತಬೇಕಿತ್ತು. ಗುರುವಾರ ಬೆಳಗ್ಗೆ ವಿಮಾನ ಹೊರಡುವ ಹೊತ್ತಿಗೆ ಈ ಘಟನೆ ಬೆಳಕಿಗೆ ಬಂತು. ನಿಯಮದ ಪ್ರಕಾರ ಏರ್ ಇಂಡಿಯಾ ವಿಮಾನ ಹಾರಾಟ ನಡೆಸುವಾಗ 12 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಆದರೆ  ಸಿಬ್ಬಂದಿಯನ್ನು ಬಂಧಿಸಿದ್ದರಿಂದ 11 ಮಂದಿ ಸಿಬ್ಬಂದಿ ಮಾತ್ರ ವಿಮಾನ ಏರಿದರು.

''ನಮ್ಮ ಸಿಬ್ಬಂದಿ ಇನ್ನೂ ಬಂಧನದಲ್ಲಿದ್ದಾರೆ. ಬಂಧನಕ್ಕೆ ಕಾರಣಗಳು ತಿಳಿದುಬಂದಿಲ್ಲ. ಏರ್ ಇಂಡಿಯಾ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ'' ಎಂದು ಏರ್ ಇಂಡಿಯಾ ವೈಮಾನಿಕ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)

ರಾಯಲಸೀಮೆ ವಿಸ್ಮಯ; ನೀರಿಲ್ಲದೇ ಗಣಪನ ವಿಸರ್ಜನೆ, ನದಿ ತಟದಲ್ಲಿ ಮೂರ್ತಿಗಳು ಅನಾಥ; ಕೊನೆಗೂ ಸುರಿದ ಮಳೆರಾಯ, Video