ನಜೀಬ್ ಜಂಗ್ - ಅರವಿಂದ್ ಕೇಜ್ರಿವಾಲ್ 
ದೇಶ

ಕೇಜ್ರಿವಾಲ್‌ರ 'ಚುನಾವಣಾ ಏಜೆಂಟ್‌' ಹೇಳಿಕೆಗೆ ಜಂಗ್ ತಿರುಗೇಟು

ತಮ್ಮನ್ನು ಬಿಜೆಪಿ 'ಚುನಾವಣಾ ಏಜೆಂಟ್‌' ಎಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್...

ನವದೆಹಲಿ: ತಮ್ಮನ್ನು ಬಿಜೆಪಿ 'ಚುನಾವಣಾ ಏಜೆಂಟ್‌' ಎಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದು, 'ಅವರಿಗೆ ತಾನು ಏನು ಮಾತಾಡುತ್ತಿದ್ದೇನೆ ಎಂಬುದರ ಅರವಿಲ್ಲ. ಹೀಗಾಗಿ ದೇವರು ಅವರನ್ನು ಕ್ಷಮಿಸಲಿ' ಎಂದಿದ್ದಾರೆ.

ಮತ್ತೆ ಸಿಎಂ ಆದ ನಂತರ ಮೊದಲ ಬಾರಿಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ಅವರು ದೆಹಲಿ ಗವರ್ನರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನೆಡೆಸಿದ್ದಾರೆ.

ನಜೀಬ್ ಜಂಗ್ ಅವರು ಚುನಾವಣಾ ಏಜೆಂಟ್ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನಮ್ಮ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಇಲ್ಲ. ಹೀಗಾಗಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಇದೇ ವೇಳೆ ಪ್ರಧಾನಿ ವಿರುದ್ಧವೂ ವಾಗ್ದಾಳಿ ನಡೆಸಿದ ದೆಹಲಿ ಸಿಎಂ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ಕಂಡು ಮೋದಿ ಹೆದರಿದ್ದಾರೆ. ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದಕ್ಕಾಗಿ ನಮ್ಮ ವಿರುದ್ಧ ಸೇಡು ತಿರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಮುಖ್ಯಮಂತ್ರಿ ಸ್ಥಾನಕ್ಕೆ ನಿತಿಶ್ ಕುಮಾರ್ ರಾಜೀನಾಮೆ?

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ, Rukmini Vasanth ಬೆಂಬಲ!

ಇರಾನ್ ಹಡಗಿನ ಮೇಲೆ ದಾಳಿ; 101 ಜನ ನಾಪತ್ತೆ; ಅಮೆರಿಕದೊಂದಿಗೆ 'ಸಂಧಾನ ಇಲ್ಲ', ಯುದ್ಧ ಮುಂದುವರಿಯಲಿದೆ

T20 ವಿಶ್ವಕಪ್ 2026: 'ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ': Sam Curran ಅತ್ಯುತ್ಸಾಹ!

SCROLL FOR NEXT