ಸೋಮವಾರ ಬ್ಲಾಕೌಟ್ ಹಂತ ಪ್ರವೇಶಿಸಲಿರುವ ಮಂಗಳಯಾನ 
ದೇಶ

ಸೋಮವಾರದಿಂದ 'ಬ್ಲಾಕೌಟ್ ಹಂತ' ಕ್ಕೆ ಮಂಗಳಯಾನ

ಮಂಗಳಯಾನ ಇನ್ನು 15 ದಿನಗಳವರೆಗೆ ಭೂಮಿಯಿಂದ ತನ್ನ ಸಂಪರ್ಕ ಮತ್ತು ಸಂವಹನವನ್ನು ಕಡಿದುಕೊಳ್ಳುತ್ತದೆ...

ಬೆಂಗಳೂರು: ಇಸ್ರೋ ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಂಗಳಯಾನ ಇನ್ನು 15 ದಿನಗಳವರೆಗೆ ಭೂಮಿಯಿಂದ ತನ್ನ ಸಂಪರ್ಕ ಮತ್ತು ಸಂವಹನವನ್ನು ಕಡಿದುಕೊಳ್ಳುತ್ತದೆ.

ಸೂರ್ಯ ಮತ್ತು ಮಂಗಳನ ಮಧ್ಯೆ ಭೂಮಿ   ಅಡ್ಡ ಬರುವುದರಿಂದ ಉಪಗ್ರಹ ತನ್ನ ಸಂಪರ್ಕ ಕಡಿದುಕೊಂಡು ಕಪ್ಪು ಹಂತಕ್ಕೆ(ಬ್ಲಾಕೌಟ್) ಪ್ರವೇಶಿಸಿ ನಿರ್ದಿಷ್ಟ ಸ್ಥಾನಕ್ಕೆ ಹೋಗಿ ಕೂರುತ್ತದೆ. ನಾಳೆಯಿಂದ(ಜೂನ್ 8) ಈ ತಿಂಗಳ 22ರವರೆಗೆ ಉಪಗ್ರಹ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧಿಕಾರಿ ತಿಳಿಸಿದ್ದಾರೆ.

ಮಂಗಳಯಾನ ನೌಕೆಯನ್ನು ಹಾರಿಸಿಬಿಟ್ಟ ನಂತರ ಇಷ್ಟೊಂದು ದೀರ್ಘ ಅವಧಿಯವರೆಗೆ ಸಂಪರ್ಕ ಕಡಿದುಕೊಳ್ಳುವುದು ಇದೇ ಮೊದಲು, ಈ ಅವಧಿಯಲ್ಲಿ ಉಹಗ್ರಹದ ಜೊತೆ ಯಾವುದೇ ಸಂವಹನ ಸಾಧ್ಯವಾಗುವುದಿಲ್ಲ. ನಂತರ,ಉಪಗ್ರಹವನ್ನು ಮತ್ತೆ ಹತೋಟಿಗೆ ತರಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷ ಮೇ ತಿಂಗಳಲ್ಲಿ ಮತ್ತೆ ಇಂತಹ ಸ್ಥಿತಿ ಉಂಟಾಗಲಿದೆ.

ಇಸ್ರೋ ಬಾಹ್ಯಾಕಾಶ ಕೇಂದ್ರ, ಕಳೆದ ವರ್ಷ ಸೆಪ್ಟೆಂಬರ್ 24ರಂದು, ಅತಿ ಕಡಿಮೆ ವೆಚ್ಚದಲ್ಲಿ ಮಂಗಳಗ್ರಹದ ಕಕ್ಷೆಗೆ ಯಶಸ್ವಿಯಾಗಿ ಉಪಗ್ರಹವನ್ನು ಕಳುಹಿಸಿತ್ತು. ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆ ಮಾಡಿತ್ತು. ಮಂಗಳಯಾನ ಸಂಚಾರ ಅವಧಿಯನ್ನು  ಹೆಚ್ಚುವರಿ ಇಂಧನ ಕಾರಣದಿಂದ ಕಳೆದ ಮಾರ್ಚ್ ನಲ್ಲಿ  ಆರು ತಿಂಗಳವರೆಗೆ ವಿಸ್ತರಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT