ಬಾಲಕಾರ್ಮಿಕ(ಸಾಂದರ್ಭಿಕ ಚಿತ್ರ) 
ದೇಶ

ಭಾರತದಲ್ಲಿದ್ದಾರೆ 24 ಲಕ್ಷ ಬಾಲಕಾರ್ಮಿಕರು: ಐಎಲ್ಒ ವರದಿ

ಬಾಲಕಾರ್ಮಿಕರ ಬಗ್ಗೆ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ನ ಅಂತಾರಾಷ್ಟ್ರೀಯ ವರದಿ ಪ್ರಕಟವಾಗಿದೆ.

ನವದೆಹಲಿ: ಬಾಲಕಾರ್ಮಿಕರ ಬಗ್ಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿ ಪ್ರಕಟವಾಗಿದ್ದು  ಭಾರತದಲ್ಲಿ ಸುಮಾರು 24 ಲಕ್ಷ ಬಾಲಕಾರ್ಮಿಕರು ಅಪಾಯಕಾರಿ ಕೈಗಾರಿಕೆಗಳಲ್ಲಿ  ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪಾಕಿಸ್ತಾನದಲ್ಲಿ 13ಲಕ್ಷ  ಹಾಗೂ ಇಂಡೋನೇಷಿಯಾದಲ್ಲಿ 12 ಲಕ್ಷ ಬಾಲಕಾರ್ಮಿಕರಿದ್ದಾರೆ ಎಂದು ವರದಿ ತಿಳಿಸಿದೆ. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್( ಐ.ಎಲ್.ಒ) ಅಧ್ಯಯನದ ಪ್ರಕಾರ,  ವಿಶ್ವದ ಮೂರನೇ ಎರಡರಷ್ಟು  ಬಾಲಕಾರ್ಮಿಕರು ಭಾರತ-ಈಜಿಪ್ಟ್ ನಲ್ಲಿದ್ದಾರೆ.  

ಜಾಗತಿಕ ಮಟ್ಟದಲ್ಲಿ ಬಾಲಕಾರ್ಮಿಕ ಪದ್ಧತಿ ಶೇ. 17.8 ರಷ್ಟಿಂದ ಶೇ.13 ಕ್ಕೆ ಇಳಿಕೆಯಾಗಿದ್ದು 5 ರಿಂದ 14 ವರ್ಷದವರೆಗಿನ ಬಾಲಕಾರ್ಮಿಕರ ಜನಸಂಖ್ಯೆ ಶೇ.9 .3 ರಿಂದ 3 .1 ಕ್ಕೆ ಇಳಿಕೆಯಾಗಿದೆ.  2004 -05 ರಲ್ಲಿ ಭಾರತದಲ್ಲಿ  90.75 ಲಕ್ಷದಷ್ಟಿದ್ದ 5 ರಿಂದ 14 ವರ್ಷದವರೆಗಿನ ಬಾಲಕಾರ್ಮಿಕರ ಜನಸಂಖ್ಯೆ 2009 - 2010 ರ ವೇಳೆಗೆ 49.84 ಲಕ್ಷಕ್ಕೆ ಇಳಿಕೆಯಾಗಿದೆ. ಬಾಲಕಾರ್ಮಿಕ ಪದ್ಧತಿ ಕಡಿಮೆಯಾಗಿದ್ದರೂ, ಪ್ರಸ್ತುತ ಕೈಗಾರಿಕೆಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕರ ಬಗ್ಗೆ ನಿಖರ ಅಂಕಿ ಅಂಶಗಳಿಲ್ಲ ಎಂದು ಚೈಲ್ಡ್ ರಿಲೀಫ್ ಆಂಡ್ ಯು (ಸಿ.ಆರ್.ವೈ) ನ  ವರ್ಷಾ ಪಿಳ್ಳೈ  ತಿಳಿಸಿದ್ದಾರೆ.  

ಕೃಷಿಯಲ್ಲಿ ಹೆಚ್ಚು ಇಳುವರಿ ಬೀಜಗಳ ಅಭಿವೃದ್ಧಿ ಹಾಗೂ ಐಟಿ ಕೈಗಾರಿಕೆಯ ಕ್ಷಿಪ್ರ ಬೆಳವಣಿಗೆ ಹೆಚ್ಚಿನ ಕೌಶಲ್ಯವಿರುವ ನೌಕರರ ಬೇಡಿಕೆಯನ್ನು ಹೆಚ್ಚಿಸಿರುವ ಪರಿಣಾಮ,  ಮಕ್ಕಳು ಶಾಲೆ ತೊರೆಯುವುದು ಕಡಿಮೆಯಾಗುತ್ತಿದೆ ಎಂದು ಐ.ಎಲ್.ಒ ವರದಿ ತಿಳಿಸಿದೆ. ಶಿಕ್ಷಣ ಹಕ್ಕು
ಕಾಯ್ದೆ 5 -14 ವರ್ಷದ ಮಕ್ಕಳಿಗೆ ಮಾತ್ರ ಅನ್ವಯವಾಗಲಿದ್ದು, ಆ ವಯೋಮಿತಿ ಕಳೆದ ಬಳಿಕ ಆರ್.ಟಿ.ಇ ಫಲಾನುಭವಿಗಳ ಭವಿಷ್ಯ ಏನಾಗಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಆದ್ದರಿಂದ ಬಾಲಕಾರ್ಮಿಕರ ಪದ್ಧತಿಯನ್ನು ಕೊನೆಗಾಣಿಸಲು ನಿಯಮಾವಳಿಗಲ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಜಂಟಿ ನಿರ್ದೇಶಕ ಗಿರಿರಾಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಒಟ್ಟಾರೆ  17 ಕೋಟಿ  ಬಾಲಕಾರ್ಮಿಕರಿದ್ದಾರೆ ಎಂದು ಐ.ಎಲ್.ಒ ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT