ರೇವಂತ್ ರೆಡ್ಡಿ 
ದೇಶ

ಮತಲಂಚ: ಶಾಸಕ ರೇವಂತ್ ರೆಡ್ಡಿಗೆ 12 ಗಂಟೆ ಜಾಮೀನು

ಮತಕ್ಕಾಗಿ ಲಂಚ ಆಮೀಷ ಹಗರಣ ಸಂಬಂಧ ಬಂಧನಕ್ಕೀಡಾಗಿರುವ ತೆಲುಗು ದೇಶಂ ಪಕ್ಷ(ಟಿಡಿಪಿ) ಶಾಸಕ ಎ. ರೇವಂತ್‌ ರೆಡ್ಡಿ ಅವರಿಗೆ 12 ಗಂಟೆ ಅವಧಿಗೆ ಜಾಮೀನು ಸಿಕ್ಕಿದೆ...

ಹೈದರಾಬಾದ್: ಮತಕ್ಕಾಗಿ ಲಂಚ ಆಮೀಷ ಹಗರಣ ಸಂಬಂಧ ಬಂಧನಕ್ಕೀಡಾಗಿರುವ ತೆಲುಗು ದೇಶಂ ಪಕ್ಷ(ಟಿಡಿಪಿ) ಶಾಸಕ ಎ. ರೇವಂತ್‌ ರೆಡ್ಡಿ ಅವರಿಗೆ 12 ಗಂಟೆ ಅವಧಿಗೆ ಜಾಮೀನು ಸಿಕ್ಕಿದೆ.

ತಮ್ಮ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಜಾಮೀನು ನೀಡುವಂತೆ ರೇವಂತ್ ರೆಡ್ಡಿ ಮನವಿ ಮಾಡಿದ್ದರು. ಇದಕ್ಕೆ ಸ್ಪರ್ಧಿಸಿದ ಸ್ಥಳೀಯ ನ್ಯಾಯಾಲಯದ 12 ಗಂಟೆಗಳ ಅವಧಿಗೆ ಜಾಮೀನು ನೀಡಿದೆ ಈ ಆದೇಶದನ್ವಯ ಗುರುವಾರ ಬೆಳಿಗ್ಗೆ 6 ಗಂಟೆಗೆ ಚೆರ್ಲಪಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಭ್ರಷ್ಟಾಚಾರದ ವಿರೋಧಿ ದಳದ ಬೆಂಗಾವಲು ಪಡೆಯ ರಕ್ಷಣೆಯಲ್ಲಿ ರೆಡ್ಡಿ ಅವರನ್ನು ಜುಬ್ಲಿ ಹಿಲ್ಸ್‌ ನಿವಾಸಕ್ಕೆ ಹಾಗೂ ಅಲ್ಲಿಂದ ಮಧಾಪುರನಲ್ಲಿರುವ ಸಭಾಂಗಣಕ್ಕೆ ಕೊರೆದೊಯ್ಯಲಾಗಿದ್ದು, ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಶುರುವಾಗಿದೆ.

ಎಸಿಬಿ ವಿಶೇಷ ನ್ಯಾಯಾಲಯವು ರೆಡ್ಡಿ ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ, ಪ್ರಕರಣದ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡದಂತೆ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಸೂಚಿಸಿತ್ತು. ಈ  ಹಿನ್ನೆಲೆಯಲ್ಲಿ ಎಸಿಬಿ ಸಿಬ್ಬಂದಿ ಟಿಡಿಪಿ ನಾಯಕನ ಮೇಲೆ ಹದ್ದಿನ ಕಣ್ಣಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel