ದೇಶ

ಮತಲಂಚ: ದೆಹಲಿಯಲ್ಲಿ ನಾಯ್ಡು ಲಾಬಿ

Vishwanath S

ಹೈದರಾಬಾದ್/ನವದೆಹಲಿ: ತೆಲಂಗಾಣದಲ್ಲಿ ಮತಕ್ಕಾಗಿ ಲಂಚ ಹಗರಣ ಈಗ ದೆಹಲಿಗೂ ತಲುಪಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬುಧವಾರ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದರು.

ಇದರ ಜತೆಗೆ ಹೈದರಾಬಾದ್‍ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ತೆಲಂಗಾಣದ ಟಿಡಿಪಿ ಶಾಸಕ ಎ.ರೇವಂತ್ ರೆಡ್ಡಿಗೆ ಒಂದು ದಿನದ ಜಾಮೀನು ನೀಡಿ ಹೈದರಾಬಾದ್ ನ ಸ್ಥಳೀಯ ನ್ಯಾಯಯಾಲಯ ಆದೇಶ ನೀಡಿದೆ.

ಸರ್ಕಾರ ಪತನ: ಇದೇ ವೇಳೆ ಎನ್‍ಡಿಟಿವಿ ಜತೆಗೆ ಮಾತನಾಡಿದ ಚಂದ್ರಬಾಬು ನಾಯ್ಡು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ತಮ್ಮ ಬಂಧನಕ್ಕೆ ಆದೇಶ ನೀಡಿದರೆ ಅವರ ಸರ್ಕಾರ ಪತನವಾಗಲಿದೆ ಎಂದು ಎಚ್ಚರಿಸಿದ್ದಾರೆ. ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಧ್ವನಿ ಮುದ್ರಿಕೆ ನಕಲಿ ಎಂದು ಪ್ರತಿಪಾದಿಸಿದ್ದಾರೆ. ನಾಯ್ಡು ಹೇಳಿಕೆಗೆ ತಿರುಗೇಟು ನೀಡಿದ ತೆಲಂಗಾಣ ಡಿಸಿಎಂ ಮೊಹಮ್ಮದ್ ಅಲಿ ಕಾರಣವಿಲ್ಲದೆ ನಾಯ್ಡು ಕಿರಿಕಿರಿ ಮಾಡುತ್ತಿದ್ದಾರೆ. ಅವರು ಆಡಳಿತದತ್ತ ಗಮನ ಹರಿಸಲಿ ಎಂದಿದ್ದಾರೆ.

SCROLL FOR NEXT