ದೇಶ

ತತ್ಕಾಲ್ ಟಿಕೆಟ್ ರದ್ದಾದ್ರೆ ಅರ್ಧ ಹಣ ವಾಪಸ್

Mainashree

ನವದೆಹಲಿ: ತತ್ಕಾಲ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸಲು ಕಷ್ಟವೇ? ಅಥವಾ ಟಿಕೆಟ್ ರದ್ದು ಮಾಡಿದರೂ ಹಣ ಸಿಗದು ಎಂಬ ಭಾವನೆಯೇ? ಹಾಗಿದ್ದರೆ ಇನ್ನು ಆ ಚಿಂತೆ ಬಿಡಿ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಬದಲು ಮಾಡಿದೆ. ಮಾತ್ರವಲ್ಲದೆ, ಕಾಯ್ದಿರಿಸಿದ ಟಿಕೆಟ್ ಅನ್ನು ರದ್ದು ಮಾಡಿದರೆ ಶೇ.50ರವರೆಗೆ ಹಣ ವಾಪಸ್ ನೀಡುವ ಕ್ರಮ ಜಾರಿ ಮಾಡಿದೆ.

ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಎ.ಸಿ. ದರ್ಜೆಯ ಪ್ರಯಾಣಕ್ಕೆ ಬೆಳಗ್ಗೆ 10 ಗಂಟೆ ಯಿಂದ 11 ಗಂಟೆ ಮತ್ತು ಇತರ ದರ್ಜೆಯ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಲು 11 ಗಂಟೆ ಯಿಂದ ಮಧ್ಯಾಹ್ನದವರೆಗೆ ಸಮಯ ನಿಗದಿ ಮಾಡಲಾಗಿದೆ. ಇದರ ಜತೆಗೆ ತತ್ಕಾಲ್ ಸ್ಪೆಷನ್ ಎಂಬ ವಿಶೇಷ ರೈಲುಗಳನ್ನೂ ಆರಂಭಿಸಲು ಇಲಾಖೆ ಮುಂದಾಗಿದೆ.

SCROLL FOR NEXT