ಟ್ವಿಟರ್ ಸಿಇಒ 
ದೇಶ

ಟ್ವಿಟರ್ ಸಿಇಒ ಡಿಕ್ ಕಸ್ಟಾಲೊ ರಾಜಿನಾಮೆ

ಸಾಮಾಜಿಕ ಜಾಲತಾಣ ಟ್ವಿಟರ್ ನ ಸಿಇಒ ಡಿಕ್ ಕಸ್ಟಾಲೊ ಜುಲೈ ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ಸಾಮಾಜಿಕ  ಜಾಲತಾಣ ಟ್ವಿಟರ್ ನ ಸಿಇಒ ಡಿಕ್ ಕಸ್ಟಾಲೊ ಜುಲೈ ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಡಿಕ್ ಕಸ್ಟಾಲೊ ರಾಜೀನಾಮೆ ಬಳಿಕ, ಜುಲೈ 1 ರಿಂದ ಟ್ವಿಟರ್ ನ ಸಹ ಸಂಸ್ಥಾಪಕ ಜ್ಯಾಕ್ ಡಾರ್ಸೆ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಇಒ ಸ್ಥಾನಕ್ಕೆ  ರಾಜೀನಾಮೆ ನೀಡಿದರೂ ಡಿಕ್, ಟ್ವಿಟರ್ ನ ನಿರ್ದೇಶಕರ ಮಂಡಳಿಯಲ್ಲಿ ಮುಂದುವರೆಯಲಿದ್ದಾರೆ.

ಟ್ವಿಟರ್ ನ ಷೇರುದಾರರೊಂದಿಗೆ ನಡೆದ ಸಭೆಯಲ್ಲಿ ರಾಜಿನಾಮೆ ನಿರ್ಧಾರವನ್ನು ಪ್ರಕಟಿಸಿರುವ ಡಿಕ್  ಕಾಸ್ಟಾಲೋ, ಬದಲಾವಣೆಗೆ ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಿಕ್ ಕಸ್ಟಾಲೊ ಕಳೆದ 5  ವರ್ಷಗಳಿಂದ  ಟ್ವಿಟರ್ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಟ್ವಿಟರ್ ನ್ನು ಅಂತರ್ಜಾಲದ ಜನಪ್ರಿಯ  ವೆಬ್ ಸೈಟ್ ನ್ನಾಗಿ  ರೂಪಿಸುವಲ್ಲಿ ಡಿಕ್ ಮಹತ್ವದ ಪಾತ್ರ ವಹಿಸಿದ್ದಾರೆ. ಆದಾಗ್ಯೂ ಫೇಸ್ ಬುಕ್ ಗಿಂತಲೂ ಟ್ವಿಟರ್ ಹಿಂದಿದ್ದು ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯೂ ಕುಂಟಿತವಾಗಿದೆ ಎಂದು ಹೇಳಲಾಗಿದೆ.

2014 ರಲ್ಲಿ ಟ್ವಿಟರ್ ಗೆ 1 .4 ಬಿಲಿಯನ್ ಆದಾಯ ಬಂದಿದ್ದರೆ 578  ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಅಲ್ಲದೇ ಟ್ವಿಟರ್  ನ ಷೇರುಗಳು ಶೇ.25 ರಷ್ಟು ಕುಸಿದಿದ್ದವು.  ಈಗ  ಟ್ವಿಟರ್ ಸಿಇಒ ರಾಜೀನಾಮೆ ನೀಡುವ ಬಗ್ಗೆ  ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಟ್ವಿಟರ್ ಷೇರುಗಳು  ಏರಿಕೆಯಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!