ಬಿಲ್ ಕ್ಲಿಂಟನ್ 
ದೇಶ

ಹಿಲರಿ ನನ್ನ ಬದುಕಿನ ಅಮೂಲ್ಯ ಕೊಡುಗೆ: ಬಿಲ್ ಕ್ಲಿಂಟನ್

``ಹಿಲರಿಯು ನಾನು ಹಿಂದೆಂದೂ ಭೇಟಿಯಾಗಿರದಂತಹ ಅಮೂಲ್ಯ ಕೊಡುಗೆ. ಸಂಕಷ್ಟದ ಸಂದರ್ಭದಲ್ಲೂ ಆಕೆ ನನ್ನೊಂದಿಗೆ ಕಲ್ಲಿನಂತೆ ನಿಂತಿದ್ದಳು''. ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯ ರೇಸ್ ನಲ್ಲಿರುವ ಹಿಲರಿ ಕ್ಲಿಂಟನ್ ಅವರ ಬಗ್ಗೆ ಪತಿ ಬಿಲ್ ಕ್ಲಿಂಟನ್ ಹೇಳಿದ ಮಾತಿದು...

ವಾಷಿಂಗ್ಟನ್: ``ಹಿಲರಿಯು ನಾನು ಹಿಂದೆಂದೂ ಭೇಟಿಯಾಗಿರದಂತಹ ಅಮೂಲ್ಯ ಕೊಡುಗೆ. ಸಂಕಷ್ಟದ ಸಂದರ್ಭದಲ್ಲೂ ಆಕೆ ನನ್ನೊಂದಿಗೆ ಕಲ್ಲಿನಂತೆ ನಿಂತಿದ್ದಳು''. ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯ ರೇಸ್ ನಲ್ಲಿರುವ ಹಿಲರಿ ಕ್ಲಿಂಟನ್ ಅವರ ಬಗ್ಗೆ ಪತಿ ಬಿಲ್ ಕ್ಲಿಂಟನ್ ಹೇಳಿದ ಮಾತಿದು.

ಸಿಎನ್‍ಎನ್‍ಗೆ ಸಂದರ್ಶನ ನೀಡಿ ಮಾತನಾಡಿದ ಬಿಲ್ ಕ್ಲಿಂಟನ್, ``ಆಕೆ ಏನಾಗಬೇಕೆಂದು ನಾನು ಬಯಸಿದ್ದೆನೋ, ಆ ಕನಸು ನನಸಾಗುವ ಅವಕಾಶವನ್ನು ಕಸಿಯಲು ನನಗೆ ಇಷ್ಟವಿಲ್ಲ. ಆಕೆ ತನ್ನ ರಾಜಕೀಯ ಗುರಿಯನ್ನು ತಲುಪಲು ನಾನು ಬೆಂಬಲ ನೀಡುತ್ತೇನೆ. ನೀನು ನನಗೆ 26 ವರ್ಷಗಳನ್ನು ನೀಡಿದ್ದಿ, ನಾನೂ ನಿನಗೆ 26 ವರ್ಷಗಳನ್ನು ನೀಡುತ್ತೇನೆ.

ಆ ಅವಧಿಯಲ್ಲಿ ಏನೇನು ಮಾಡಬೇಕೆಂದೆನಿಸುತ್ತದೋ ಅದೆಲ್ಲವನ್ನೂ ಸಾಧಿಸು ಎಂದು ಹಿಲರಿ ನ್ಯೂಯಾರ್ಕ್‍ನಿಂದ ಸೆನೇಟ್‍ಗೆ ಆಯ್ಕೆಯಾದಾಗಲೇ ನಾನು ಹೇಳಿದ್ದೆ'' ಎಂದಿದ್ದಾರೆ ಕ್ಲಿಂಟನ್. ಕ್ಲಿಂಟನ್‍ರ ಈ ಸಂದರ್ಶನವು ಭಾನುವಾರ ಪ್ರಸಾರವಾಗಲಿದೆ. ಇದೇ ವೇಳೆ, ಹಿಲರಿ ಅವರ ಪ್ರಚಾರ ರ್ಯಾಲಿಗೆ ನ್ಯೂಯಾರ್ಕ್‍ನಲ್ಲಿ ಶನಿವಾರ ಚಾಲನೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!