ದೇಶ

ಸುಷ್ಮಾ ಸ್ವರಾಜ್ ಗೆ ತಾನೇನು ಮಾಡಿದ್ದೇನೆ ಎಂಬ ಅರಿವಿಲ್ಲ: ಪ್ರಶಾಂತ್ ಭೂಷಣ್

Srinivasamurthy VN

ನವದೆಹಲಿ: ಐಪಿಎಲ್ ವಿವಾದದಲ್ಲಿ ಸಿಲುಕಿರುವ ಲಲಿತ್ ಮೋದಿ ಅವರು ವೀಸಾ ಪಡೆಯಲು ಸುಷ್ಮಾ ಸ್ವರಾಜ್ ಅವರು ನೆರವಾದದ್ದು, ಸರಿಯಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಪ್ರಶಾಂತ್ ಭೂಷಣ್ ಅವರು, "ದೇಶದದಿಂದ ಓಡಿ ಹೋದ ಪರವಾದ ಧೋರಣೆ ಸರಿಯಲ್ಲ. ಸುಷ್ಮಾ ಸ್ವರಾಜ್ ತಮಗೆ ತಕ್ಕದಲ್ಲದ ಕೆಲಸ ಮಾಡಿದ್ದಾರೆ. ಲಲಿತ್ ಮೋದಿ ಸುಷ್ಮಾ ಸ್ವರಾಜ್ ಪುತ್ರಿಯ ಕಕ್ಷೀದಾರರಾಗಿದ್ದು, ಈ ಹಿನ್ನಲೆಯಲ್ಲಿ ಅವರು ಮೋದಿಗೆ ಸಹಾಯ ಮಾಡಿದ್ದಾರೆ. ಆದರೆ ಸುಷ್ಮಾ ಸ್ವರಾಜ್ ಅವರಿಗೆ ತಾವು ಏನು ಮಾಡಿದ್ದೇವೆ ಎಂಬ ಅರಿವಿಲ್ಲ ಎಂದು ಹೇಳಿದ್ದಾರೆ.

"ಈ ಪ್ರಕರಣದಲ್ಲಿ ಕಾನೂನು ಸಂಘರ್ಷದ ಅಗತ್ಯತೆ ತುಂಬಾ ಇದೆ. ಲಲಿತ್ ಮೋದಿಗೆ ಸಹಾಯ ಮಾಡುವ ಮೂಲಕ ಸುಷ್ಮಾ ಸ್ವರಾಜ್ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ. ಭಾರತ ಸರ್ಕಾರ ಕ್ರಿಮಿನಲ್ ಎಂದು ಪರಿಗಣಿಸ್ಪಟ್ಟ ವ್ಯಕ್ತಿ ರೆ ದೇಶಕ್ಕೆ ಪ್ರಯಾಣಿಸಲು ಭಾರತ ಸರ್ಕಾರದ ವಿದೇಶಾಂಗ ಸಚಿವರು ಸಹಾಯ ಮಾಡಿದ್ದಾರೆ. ಲಲಿತ್ ಮೋದಿ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥೆ ಮಾಡುವಂತೆ ಭಾರತ ಮೂಲದ ಬ್ರಿಟನ್ ಸಂಸದ ಕೀತ್ವಾಸ್ ಗೆ ಸುಷ್ಮಾ ಮನವಿ ಮಾಡಿದ್ದಾರೆ. ಇಂಗ್ಲೆಂಡ್ ನಿಂದ ಪೋರ್ಚುಗಲ್ ತೆರಳಲು ಬೇಕಾದ ಪ್ರಯಾಣದ ದಾಖಲೆ ಪತ್ರಗಳನ್ನು ಒದಗಿಸಿಕೊಡುವಂತೆ ಕೀತ್ಲಾಸ್ ಗೆ ಸುಷ್ಮಾ ಹೇಳಿದ್ದರು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇನ್ನು ಐಪಿಎಲ್ ಹಣ ದುರ್ಬಳಕೆ ಮತ್ತು ಬೆಟ್ಟಿಂಗ್ ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿರುದ್ಧ ಭಾರತದ ಜಾರಿ ನಿರ್ದೇಶನಾಲಯ ಲುಕ್ ಔಟ್ ನೋಟಿಸ್ ಜಾರಿ ಮಾಡಿತ್ತು. ಆದರೆ ಭಾರತದ ವಿಚಾರಣೆ ಎದುರಿಸುವ ಬದಲು ಲಲಿತ್ ಮೋದಿ 2010ರಿಂದಲೂ ಬ್ರಿಟನ್ ನಲ್ಲಿ ಠಿಕಾಣಿ ಹೂಡಿದ್ದಾರೆ. ಈ ನಡುವೆ ಲಲಿತ್ ಮೋದಿ ಪೋರ್ಚುಗಲ್ ಗೆ ತೆರಳುವ ಕುರಿತು ಭಾರತ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ನೆರವು ಕೋರಿದ್ದು, ಸುಷ್ಮಾ ಮೋದಿಗೆ ತಮ್ಮ ಪ್ರಭಾವ ಬಳಸಿ ಸಹಾಯ ಮಾಡಿದ್ದಾರೆ. ಭಾರತ ಮೂಲದ ಬ್ರಿಟನ್ ಸಂಸದ ಕೀತ್ವಾಸ್ ಗೆ ಮನವಿ ಮಾಡಿದ್ದ ಸುಷ್ಮಾ ಸ್ವರಾಜ್ ಲಲಿತ್ ಮೋದಿ ಪ್ರೋರ್ಚುಗಲ್ ಗೆ ತೆರಳಲು ಬೇಕಾದ ಎಲ್ಲ ದಾಖಲೆ ಪತ್ರಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿ ಬಹಿರರಂಗಗೊಂಡಿದ್ದು, ಕೀತ್ವಾಸ್ ಮತ್ತು ಲಲಿತ್ ಮೋದಿ ನಡುವಿನ ಈ ಮೇಲ್ ಸಂಭಾಷಣೆಯ ಮಾಹಿತಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡಿದೆ.

SCROLL FOR NEXT