ದೇಶ

ಮೊಹಮ್ಮದ್ ಮರ್ಸಿಗೆ ಮರಣದಂಡನೆ: ಆದೇಶ ದೃಢಪಡಿಸಿದ ನ್ಯಾಯಾಲಯ

ಕೈರೊ: ಈಜಿಪ್ಟ್ ಮಾಜಿ ಅಧ್ಯಕ್ಷ  ಹಾಗೂ ಮುಸ್ಲಿಂ ಬ್ರದರ್ ಹುಡ್ ನ ಮುಖ್ಯ ಸಲಹೆಗಾರರಾಗಿದ್ದ ಮೊಹಮ್ಮದ್ ಮೊರ್ಸಿಗೆ ನ್ಯಾಯಾಲಯವು ಮರಣದಂಡನೆ ಮಂಗಳವಾರ ಮರಣದಂಡನೆ ವಿಧಿಸಿದೆ.

2011ರಲ್ಲಿ ಕಾರಾಗೃಹ ಪರಾರಿ, ಅಪಹರಣ, ಗೂಢಚರ್ಯೆ ಆಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊರ್ಸಿ ಮತ್ತು ಇನ್ನಿತರೆ 80 ಇಸ್ಲಾಂವಾದಿ ಉಗ್ರರಿಗೆ ಕೈರೊ ನ್ಯಾಯಾಲಯವು ಮೇ ತಿಂಗಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಿತ್ತು. ಈಜಿಪ್ಟ್ ಕಾನೂನಿನ ಪ್ರಕಾರ ಎಲ್ಲಾ ಮರಣದಂಡನೆ ಪ್ರಕರಣಗಳನ್ನು ಪರಾಮರ್ಶಿಸುವುದಕ್ಕೂ ಮುನ್ನ ಆದೇಶವನ್ನು ಅತ್ಯುನ್ನತ ಧರ್ಮ ಗುರುವಿನ ಬಳಿ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ನ್ಯಾಯಾಲಯದ ಆದೇಶಕ್ಕೆ ಇದೀಗ ಧರ್ಮಗುರುಗಳು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ತನ್ನ ಆದೇಶವನ್ನು ದೃಢಪಡಿಸಿದೆ.

ಹೊಸ್ನಿ ಮುಬಾರಕ್ ಅವರ ವಂಶಾಡಳಿತ ವಿರುದ್ಧ ಈಜಿಪ್ಟ್ ಜನತೆ ಪ್ರತಿಭಟನೆಗಿಳಿದಿತ್ತು. ಜನರ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಮುಬಾರಕ್ ಅವರು ತಮ್ಮ ಸ್ಥಾನದಿಂದ ಅನಿವಾರ್ಯವಾಗಿ ಕೆಳಗಿಳಿಯುವಂತೆ ಮಾಡಿತ್ತು. ಮುಬಾರಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಮೊಹಮ್ಮದ್ ಮೊರ್ಸಿ ಅಧ್ಯಕ್ಷ ಸ್ಥಾನಕ್ಕೇರಿದರು. ಆದರೆ ಜನರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಮೊಹಮ್ಮದ್ ಮೊರ್ಸಿ ವಿಫಲರಾಗಿದ್ದರು. ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಮೊರ್ಸಿ ಅವರು ಜನರ ಆಶಯಗಳಿಗೆ ಸ್ಪಂದಿಸುವುದನ್ನು ಬಿಟ್ಟು ಮುಸ್ಲಿಂ ಬ್ರದರ್ ಹುಡ್ ಸಂಘಟನೆಗಳೊಂದಿಗೆ ಕೈ ಜೋಡಿಸಿ ಅವುಗಳು ಹಾಕಿದ ತಾಳಕ್ಕೆ ಬೊಂಬೆಯಂತೆ ಕುಣಿಯಲಾರಂಭಿಸಿದ್ದರು.

ಇದರ ಪರಿಣಾಮವಾಗಿ ಅಮಾಯಕ ಜನರ ಬಂಧನ, ಸೆರೆವಾಸ, ಚಿತ್ರಹಿಂಸೆ, ಸಾಮೂಹಿಕ ನರಮೇಧದಂತಹ ಘಟನೆಗಳು ಈಜಿಪ್ಟ್ ನಾದ್ಯಂತ ಹೆಚ್ಚಾಗತೊಡಗಿದವು. ಇದರಿಂದಾಗಿ ರೋಸಿಹೋದ ಈಜಿಪ್ಟ್ ಜನತೆ ಮತ್ತೆ 2013ರಲ್ಲಿ ಮೊರ್ಸಿ ವಿರುದ್ಧವೂ ದಂಗೆ ಎದ್ದರು. ಜನರ ಪ್ರತಿಭಟನೆಗಳು ತಾರಕ್ಕೇರಿದಾಗ ನಿಯಂತ್ರಿಸಲಾಗದ ಸೇನೆ, ಮಧ್ಯಪ್ರವೇಶ ಮಾಡಿ ಮೊರ್ಸಿ ಅವರನ್ನು ಪದಚ್ಯುತಗೊಳಿಸಿತ್ತು.  ನಂತರ ತನ್ನ ಅಧಿಕಾರದ ಅವಧಿಯಲ್ಲಿ ಸಾಮಾನ್ಯ ಜನತೆದೆ ಹಿಂಸೆ ನೀಡಿದ ಆರೋಪದ ಮೇಲೆ ಕೈರೋ ನ್ಯಾಯಾಲಯವು ಮೊರ್ಸಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಮೊರ್ಸಿ ವಿರುದ್ಧ ಆರೋಪ ಪಟ್ಟಿಗಳು ಹೆಚ್ಚುತ್ತಾ ಹೋಯಿತು. ಎಲ್ಲಾ ಪ್ರಕರಣಗಳಿಗಿಂತಲೂ 2011ರಲ್ಲಿ ನಡೆದಿದ್ದ ಸಾಮೂಹಿಕ ಜೈಲು ಪರಾರಿ ಹಾಗೂ ಗೂಢಚಾರ್ಯೆ ಪ್ರಕರಣ ಗಂಭೀರ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೊರ್ಸಿ ಅವರಿಗೆ ಮರಣದಂಡನೆ ವಿಧಿಸಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT