ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 
ದೇಶ

ರಾಜಿನಾಮೆಗೆ ನಿರ್ಧರಿಸಿದ್ದ ಸುಷ್ಮಾ?

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ನೆರವು ನೀಡಿದ ವಿವಾದ ಸ್ಪೋಟಗೊಳ್ಳುತ್ತದೆಂದು ಗೊತ್ತಾದೊಡನೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜಿನಾಮೆ ನೀಡಲು ಮುಂದಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ...

ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ನೆರವು ನೀಡಿದ ವಿವಾದ ಸ್ಪೋಟಗೊಳ್ಳುತ್ತದೆಂದು ಗೊತ್ತಾದೊಡನೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜಿನಾಮೆ ನೀಡಲು ಮುಂದಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ವಿವಾದ ಚಾನೆಲ್‍ಗಳಲ್ಲಿ ಪ್ರಸಾರವಾಗಲಿದೆ ಎಂಬ ಸುಳಿವು ಸಿಕ್ಕಿದೊಡನೆ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದರು. ಮಾರನೇ ದಿನ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಸದಸ್ಯರು ಸಭೆ ಸೇರಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಸುಷ್ಮಾ ಸ್ವರಾಜ್, ``ಈ ವಿವಾದದ ಮೂಲಕ ಸರ್ಕಾರಕ್ಕೆ ಮುಜುಗರ ಉಂಟುಮಾಡುವುದು ತಮಗೆ ಇಷ್ಟವಿಲ್ಲ'' ಎಂದು ರಾಜಿನಾಮೆ ನೀಡಲು ಮುಂದಾಗಿದ್ದರು. ಆದರೆ ಇದಕ್ಕೆ ಆರೆಸ್ಸೆಸ್ ಒಪ್ಪಲೇ
ಇಲ್ಲ.

``ನೀವು ಯಾವುದೇ ತಪ್ಪು ಮಾಡಿಲ್ಲ. ಬ್ರಿಟನ್ ಅಧಿಕಾರಿಗಳು ಲಲಿತ್ ಮೋದಿಗೆ ಸಹಾಯ ಮಾಡಿದ್ದರೆ ಅದು ಅವರ ಕಾನೂನಿನ ಪ್ರಕಾರ ಮಾಡಿರಲಾಗುತ್ತದೆ. ಅದಕ್ಕಾಗಿ ನೀವು ರಾಜಿನಾಮೆ ನೀಡುವ ಅಗತ್ಯವಿಲ್ಲ'' ಎಂದು ಹೇಳುವ ಮೂಲಕ ಆರೆಸ್ಸೆಸ್ ಸುಷ್ಮಾರನ್ನು ಸಮಾಧಾನಪಡಿಸಿತ್ತು. ಅಷ್ಟೇ ಅಲ್ಲ, ಸಚಿವೆಯನ್ನು ಸಮರ್ಥಿಸಿಕೊಳ್ಳುವ ಬಗ್ಗೆ ಕಾರ್ಯತಂತ್ರವೊಂದನ್ನೂ ಸಿದ್ಧಪಡಿಸಿತು. ಅದರಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರು ಮಾಧ್ಯಮಗಳ ಮುಂದೆ ಸುಷ್ಮಾರನ್ನು ಬೆಂಬಲಿಸಿ ಮಾತನಾಡಿದ್ದರು ಎಂದೂ ಹೇಳಲಾಗಿದೆ.

ಆ ಮೂರು ವ್ಯಕ್ತಿಗಳು ಲಲಿತ್ ಮೋದಿ ಪರ ವಕೀಲರ ಪಿಆರ್ ಸಂಸ್ಥೆ ಮಾಧ್ಯಮಗಳಿಗೆ ಕಳುಹಿಸಿದ 250 ಪುಟಗಳ ದಾಖಲೆಯ 33ನೇ ಪುಟದಲ್ಲಿ ಮೋದಿ ಬ್ರಿಟನ್ ನಲ್ಲಿ ಉಳಿಯಲು ಯಾರೆಲ್ಲ ನೆರವು ನೀಡಿದ್ದರು ಎಂಬ ಮಾಹಿತಿಯಿತ್ತು.

ಆ ಮೂವರೆಂದರೆ,

  • ಮೆಹಮೂದ್ ಅಬ್ದಿ, ಲಲಿತ್ ಮೋದಿ ವಕೀಲ
  • ರಾಬರ್ಟ್ ನಿಕೋಲ್ಸ್, ದಕ್ಷಿಣ ಆಫ್ರಿಕಾ ಸೇರಿದ ಭದ್ರತಾ ತಜ್ಞ
  • ವಸುಂಧರಾ ರಾಜೇ, ರಾಜಸ್ಥಾನ ಮುಖ್ಯಮಂತ್ರಿ
ವಿಚಾರ ಗೊತ್ತೇ ಇಲ್ಲ ಎಂದ ಸುಜಾತಾ !

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!