ವಸುಂಧರಾ ರಾಜೇ ಮತ್ತು ಲಲಿತ್ ಮೋದಿ
ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸುತ್ತ ಗಿರಕಿ ಹೊಡೆಯುತ್ತಿದ್ದ ವಿವಾದ ಈಗ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಕೊರಳಿಗೂ ಸುತ್ತಿಕೊಂಡಿದೆ. ವಿವಾದದಿಂದ ಕಂಗೆಟ್ಟಿದ್ದ ಮೋದಿ ಸರ್ಕಾರಕ್ಕೆ ಈಗ ಸಚಿವೆ ಸುಷ್ಮಾ ಸ್ವರಾಜ್ ಜೊತೆ ರಾಜೇ ಹೆಸರೂ ತಳಕುಹಾಕಿಕೊಂಡಿರುವುದು ಮತ್ತಷ್ಟು ಮುಜುಗರ ಉಂಟುಮಾಡಿದೆ.
ಏನಿದು ರಾಜೇ ವಿವಾದ?
- ಸಿಎಂ ವಸುಂಧರಾ ರಾಜೇ ಅವರಿಗೆ ಲಲಿತ್ ಮೋದಿ ಜತೆ ನಿಕಟ ಸಂಬಂಧವಿತ್ತು ಎಂಬುದು ಎರಡು ವಿಚಾರಗಳಿಂದ ಬೆಳಕಿಗೆ ಬಂದಿದೆ.
- ಆ ಪೈಕಿ ಮೊದಲನೆಯದ್ದು, 2011ರ ಆಗಸ್ಟ್ ನಲ್ಲಿ ವಸುಂಧರಾ ರಾಜೇ ಅವರು ಲಲಿತ್ ಮೋದಿ ಅವರ ಬ್ರಿಟನ್ ವಲಸೆ ಅರ್ಜಿಗೆ ಗುಪ್ತ ಸಾಕ್ಷಿಯಾಗಿದ್ದರು. ಜತೆಗೆ, ಈ ವಿಚಾರ ರಹಸ್ಯವಾಗಿರಬೇಕು. ಯಾವುದೇ ಕಾರಣಕ್ಕೂ ಭಾರತೀಯ ಅಧಿಕಾರಿಗಳಿಗೆ ಈ ಮಾಹಿತಿ ಗೊತ್ತಾಗಬಾರದು ಎಂದೂ ಸೂಚಿಸಿದ್ದರು. ಆ ಸಮಯದಲ್ಲಿ ರಾಜೇ ಅವರು ರಾಜಸ್ಥಾನ ವಿಧಾನಸಭೆಯ ಪ್ರತಿಪಕ್ಷ ನಾಯಕಿಯಾಗಿದ್ದರು ಎಂದು ಟೈಮ್ಸ್ ನೌ ವರದಿ ಮಾಡಿದೆ.
- ಎರಡನೆಯ ವಿವಾದವೆಂದರೆ, ಲಲಿತ್ ಮೋದಿ ಅವರ ಪತ್ನಿ ಚಿಕಿತ್ಸೆ ಪಡೆದ ಪೋರ್ಚುಗಲ್‍ನ ಆಸ್ಪತ್ರೆಯೊಂದಿಗೆ ರಾಜಸ್ಥಾನ ಸರ್ಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಮೋದಿ ಪತ್ನಿ ಚಿಕಿತ್ಸೆ ಪಡೆದ ಎರಡೇ ತಿಂಗಳಲ್ಲಿ ಅಂದರೆ 2014ರ ಅ.2ರಂದು ಈ ಒಪ್ಪಂದ ನಡೆದಿದೆ. ಒಪ್ಪಂದದಂತೆ ರಾಜಸ್ಥಾನ ಸರ್ಕಾರವು ಲಿಸ್ಬನ್ ಮೂಲದ ಚಂಪಾಲಿಮಾಡ್ ಫೈಂಡೇಷನ್‍ನ ಆಸ್ಪತ್ರೆಗೆ ಬರೋಬ್ಬರಿ 35 ಸಾವಿರ ಚದರ ಅಡಿ ಭೂಮಿಯನ್ನು ನೀಡಿದೆ.
ದಾಖಲೆ ನೀಡಿ ತಾವೇ ಸಿಕ್ಕಿಹಾಕಿಕೊಂಡ್ರು!
ರಾಜಿನಾಮೆಗೆ ಮುಂದಾಗಿದ್ದ ಸುಷ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics