ದೇಶ

ಹಿಮಾಚಲ ಪ್ರದೇಶ ಸಿಎಂ ವಿರುದ್ಧ ಎಫ್‌ಐಆರ್ ದಾಖಲು

Lingaraj Badiger

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಅವರ ಕುಟಂಬದ ವಿರುದ್ಧ ಸಿಬಿಐ ಗುರುವಾರ ಎಫ್‌ಐಆರ್ ದಾಖಲಿಸಿದೆ.

ವೀರಭದ್ರ ಸಿಂಗ್ ಅವರು ಕೇಂದ್ರ ಸಚಿವರಾಗಿದ್ದ ವೇಳೆ 6.1 ಕೋಟಿ ರುಪಾಯಿ ಅಕ್ರಮ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇಂದು ಸಿಂಗ್ ಹಾಗೂ ಪತ್ನಿ ಪ್ರತಿಭಾ ಸಿಂಗ್, ಪುತ್ರ ವಿಕ್ರಮಾದಿತ್ಯ ಸಿಂದ್, ಪುತ್ರಿ ಅಪರಾಜಿತ ಸಿಂಗ್ ಮತ್ತು ಎಲ್‌ಐಸಿ ಏಜೆಂಟ್ ಆನಂದ್ ಚೌವ್ಹಾಣ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

2009ರಿಂದ 11ರವರೆಗೆ ಯುಪಿಎ ಸರ್ಕಾರದಲ್ಲಿ ಉಕ್ಕು ಸಚಿವರಾಗಿದ್ದ ವೇಳೆ ವೀರಭದ್ರ ಸಿಂಗ್ ಅವರು 6.1 ಕೋಟಿ ರುಪಾಯಿ ಅಕ್ರಮ ಆಸ್ತಿ ಗಳಿಸಿರುವ ಕುರಿತು ಸಿಬಿಐ ಪ್ರಾಥಮಿಕ ತನಿಖೆ ನಡೆಸಲಿದೆ.

SCROLL FOR NEXT