ಭುವನೇಶ್ವರ: ಕಾಂಗ್ರೆಸ್ ತೊರೆದೆ ಒಡಿಶಾದ ಮಾಜಿ ಮುಖ್ಯಮಂತ್ರಿ ಗಿರಿಧರ್ ಗಮಾಂಗ್ ಅವರು ತಮ್ಮ ಪುತ್ರ ಶಶಿರ್ ಗಮಾಂಗ್ ಅವರೊಂದಿಗೆ ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವರೂ ಆಗಿರುವ ಗಿರಿಧರ್ ಹಾಗೂ ಅವರ ಪುತ್ರ ಶಿಶಿರ್, ಕಮಲದ ಗುರುತಿನ ಟೋಪಿಗಳನ್ನು ಧರಿಸುವ ಮೂಲಕ ಕೇಸರಿ ಪಕ್ಷಕ್ಕೆ ಸೇರಿದರು.
ಈ ವೇಳೆ, ಕೇಂದ್ರ ಸಚಿವರಾದ ಜುವಾಲ್ ಒರಾಮ್ ಹಾಗೂ ಧರ್ಮೇಂದ್ರ ಪ್ರಧಾನ್, ಒಡಿಶಾ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ. ಸಿಂಗ್ದೆ ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.