ಮುಂಬೈ ದಾಳಿ(ಸಾಂದರ್ಭಿಕ ಚಿತ್ರ) 
ದೇಶ

ಭಯೋತ್ಪಾದಕ, ಬಾಂಬ್ ದಾಳಿಯಿಂದ 25 ವರ್ಷಗಳಲ್ಲಿ 2,000 ಕ್ಕೂ ಹೆಚ್ಚು ಸಾವು

1989 ರಿಂದ ಈ ವರೆಗೂ ನಡೆದಿರುವ ಭಯೋತ್ಪಾದಕರ ದಾಳಿ ಹಾಗೂ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭದ್ರತಾ ಸಿಬ್ಬಂದಿಗಳೂ ಸೇರಿ ಒಟ್ಟು 2000 ಜನರು ಮೃತಪಟ್ಟಿದ್ದಾರೆ.

ನವದೆಹಲಿ: 1989 ರಿಂದ ಈ ವರೆಗೂ ನಡೆದಿರುವ ಭಯೋತ್ಪಾದಕರ ದಾಳಿ ಹಾಗೂ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭದ್ರತಾ ಸಿಬ್ಬಂದಿಗಳೂ ಸೇರಿ ಒಟ್ಟು 2,000 ಜನರು ಮೃತಪಟ್ಟಿದ್ದಾರೆ ಎಂದು ಕೆಂದ್ರ ಗೃಹ ಇಲಾಖೆ ತಿಳಿಸಿದೆ.

ಆರ್.ಟಿ.ಐ ಅರ್ಜಿಯೊಂದಕ್ಕೆ ಗೃಹ ಇಲಾಖೆ ನೀಡಿರುವ ಉತ್ತರದಿಂದ ಈ ಅಂಕಿ ಅಂಶ ಬಹಿರಂಗವಾಗಿದ್ದು, 1989 ರಿಂದ 2015 ರ ಮೇ.31 ವರೆಗೆ 2129 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ 1993 ರ ಮುಂಬೈ ಸರಣಿ ಸ್ಫೋಟ, 26 /11 ರ ಮುಂಬೈ ನಲ್ಲಿ ನಡೆದ ಭಯೋತ್ಪಾದಕರ ದಾಳಿ, 1998 ರ ಕೊಯಂಬತ್ತೂರು ಸರಣಿ ಸ್ಫೋಟ ಪ್ರಕರಣ, 2005 ರ ದೆಹಲಿ ಸ್ಪೋಟ ಪ್ರಕರಣ, 2006 ರ ವಾರಾಣಸಿ ಸ್ಫೋಟ, 2007 ರ ಸಂಜೋತಾ ಎಕ್ಸ್ ಪ್ರೆಸ್, 2008 ರ ಗುವಾಹಟಿ ಬಾಂಬ್ ಸ್ಫೋಟ ಪ್ರಕರಣ, 2010 ರ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗೃಹ ಇಲಾಖೆ ವರದಿ ಹೇಳಿದೆ.

ಇದೆ ವೇಳೆ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಭದ್ರತಾ ಯೋಜನೆಗಳಿಗಾಗಿ ಕಳೆದ 5 ವರ್ಷಗಳಲ್ಲಿ 595 ಕೋಟಿ ರೂಪಾಯಿ ನೀಡಲಾಗಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!