ದೇಶ

ಶಾಲೆ, ಶಿಕ್ಷರ ತರಬೇತಿ ಕೋರ್ಸ್ ಗಳಲ್ಲಿ ಯೋಗ ಕಡ್ಡಾಯ: ಸ್ಮೃತಿ ಇರಾನಿ

Srinivas Rao BV

ನವದೆಹಲಿ: ಯೋಗದಿನವನ್ನು ಕೇಂದ್ರ ಸರ್ಕಾರದ ಶಾಲೆಗಳಲ್ಲಿ ಕಡ್ಡಾಯ ಮಾಡುವುದರೊಂದಿಗೆ ಶಿಕ್ಷಕರ ತರಬೇತಿ ಕೋರ್ಸ್ ಗಳಲ್ಲೂ ಕಡ್ಡಾಯಗೊಳಿಸಲಾಗುತ್ತಿದೆ.

ಪ್ರತಿ ವರ್ಷವೂ ನವದೆಹಲಿಯಲ್ಲಿ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆ ಆಯೋಜನೆಯಾಗಲಿದ್ದು, ಉತ್ತಮವಾಗಿ ಯೋಗ ಪ್ರದರ್ಶನ ಮಾಡುವ ಯೋಗ ಪಟುವಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಯೋಗಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಬಿಡುಗಡೆ ಮಾಡಿ ಮಾತನಾಡಿದ ಸ್ಮೃತಿ ಇರಾನಿ, ಪ್ರಾಯೋಗಿಕವಾಗಿ ಯೋಗ ಮಾಡುವುದಕ್ಕೆ 80 ಅಂಕಗಳನ್ನು ನೀಡಲಾಗುತ್ತದೆ, ಆದ್ದರಿಂದ ಪಠ್ಯಕ್ರಮದಲ್ಲಿ ಯೋಗ ವಿಷಯವನ್ನು ಸೇರಿಸಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಯೋಗ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರ ಬಗ್ಗೆ ನಿರ್ಣಯ ಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರಗಳಿಗೆ ಸ್ವಾತಂತ್ರವಿದೆ ಎಂದಿದ್ದಾರೆ. ಪ್ರಸ್ತುತ ಕೇಂದ್ರೀಯ ವಿದ್ಯಾಲಯ ಹಾಗೂ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಲಾಗಿದೆ.

SCROLL FOR NEXT