ಪಾಕಿಸ್ತಾನದಲ್ಲಿರುವ ನಿರಾಶ್ರಿತ ಹಿಂದೂಗಳು(ಸಾಂದರ್ಭಿಕ ಚಿತ್ರ ) 
ದೇಶ

ಮೋದಿ ಸರ್ಕಾರದಿಂದ 4,300 ಪಾಕ್, ಅಪ್ಘಾನ್ ಹಿಂದೂಗಳಿಗೆ ಭಾರತೀಯ ಪೌರತ್ವ?

ಈವರೆಗೂ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದಲ್ಲಿದ್ದ 4,300 ಹಿಂದೂ ಹಾಗೂ ಸಿಖ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.

ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಮತೆ ವಿವಿಧ ದೇಶಗಳಲ್ಲಿರುವ ನಿರಾಶ್ರಿತ ಹಿಂದೂಗಳಿಗೆ ಭಾರತದ ಪೌರತ್ವ ಹಾಗೂ ಪುನರ್ವಸತಿ ಕೊಡುವುದಾಗಿ ಚುನಾವಣೆಗೂ ಮುನ್ನ ಬಿಜೆಪಿ ಘೋಷಿಸಿತ್ತು.  ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈವರೆಗೂ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದಲ್ಲಿದ್ದ 4 ,300 ಹಿಂದೂ ಹಾಗೂ ಸಿಖ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.

ಆದರೆ ಈ ಬಗ್ಗೆ ಆರ್.ಟಿ.ಐ ದಾಖಲೆಗಳೇ ಬೇರೆ ರೀತಿಯಾದ ಅಂಕಿ ಅಂಶ ನೀಡುತ್ತಿದೆ. ಗೃಹ ಸಚಿವಾಲಯವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿರುವ ನಿರಾಶ್ರಿತ ಹಿಂದೂ, ಸಿಖ್ ಸಮುದಾಯದ ಒಟ್ಟು 611 ಜನರಿಗೆ ಮಾತ್ರ ಭಾರತದ ಪೌರತ್ವ ದೊರೆತಿದೆ. 2014 ರಲ್ಲಿ 515 ಜನರಿಗೆ ಪೌರತ್ವ ದೊರೆತಿದ್ದರೆ ಜೂನ್ ನ ಕಳೆದವಾರದಲ್ಲಿ ಕೇವಲ 150 ಜನರಿಗೆ ಮಾತ್ರ ಭಾರತದ ನಾಗರಿಕತ್ವ ಸಿಕ್ಕಿದೆ.

4 ,300  ಜನರಿಗೆ ಭಾರತೀಯ ನಾಗರಿಕತ್ವ ದೊರೆತಿದೆ ಎಂದು ವರದಿ ಪ್ರಕಟಿಸಿದ್ದ ಸುದ್ದಿ ಸಂಸ್ಥೆ ಇದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಕ್ರಮದ ಪರಿಣಾಮ ಎಂದು ಬರೆದಿತ್ತು. ಆದರೆ ಅದೇ ರಾಜನಾಥ್ ಸಿಂಗ್ ಅವರ ಸಚಿವಾಲಯ ಸುದ್ದಿ ಸಂಸ್ಥೆ ನೀಡಿರುವ ಮಾಹಿತಿಗಿಂತಲೂ ಭಿನ್ನವಾದ ಮಾಹಿತಿ ನೀಡಿದ್ದು ಈವರೆಗೂ ಕೇವಲ 611 ಜನ ನಿರಾಶ್ರಿತರಿಗೆ ಮಾತ್ರ ಭಾರತ ಸರ್ಕಾರ ಇಲ್ಲಿನ ಪುರತ್ವ ನೀಡಿದೆ ಎಂದು ಹೇಳಿದೆ. ವಿನೋದ್ ಎಂಬುವವರು ಆರ್.ಟಿ.ಐ ಅರ್ಜಿಯಿಂದ ಈ ಅಂಕಿ ಅಂಶ ಬಹಿರಗವಾಗಿದ್ದು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ  25 ಬೇರೆ ಬೇರೆ ರಾಷ್ಟ್ರಗಳಲ್ಲಿದ್ದ ನಿರಾಶ್ರಿತ ಹಿಂದೂಗಳಿಗೆ ಈ ವರೆಗೂ ಪೌರತ್ವ ನೀಡಲಾಗಿದೆ ಎಂದು ತಿಳಿದುಬಂದಿದೆ. ಯುಕೆ, ಯು.ಎಸ್, ನೆದರ್ ಲ್ಯಾಂಡ್, ಜರ್ಮನಿ, ಕೆನಡಾ, ಬಾಂಗ್ಲಾ ದೇಶ, ಚೀನಾ, ಇಟಾಲಿ, ಕೀನ್ಯಾ ಹಾಗೂ ಲಿಬಿರಿಯಾ ದೇಶದಲ್ಲಿದ್ದ ಹಿಂದೂಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?