ಭೋಪಾಲ್: ಭಾರತದ ಕಾಡುಮೃಗಗಳ ಬೇಟೆಗಾರರಿಗೆ ಹಾಗೂ ಕಳ್ಳ ಸಾಗಣೆದಾರರಿಗೊಂದು ಎಚ್ಚರಿಕೆಯ ಸಂದೇಶ! ಹುಲಿ ಸಿಂಹಗಳನ್ನು ಕೊಲ್ಲಲು ಕಾಡು ಹೊಕ್ಕರೆ ನಿಮ್ಮ ಜೀವ ನಾಯಿಪಾಲಾದೀತು ಜೋಕೆ! ಹೌದು. ಇದೀಗ ವನ್ಯಮೃಗಗಳ ರಕ್ಷಣೆಗೆ ಶ್ವಾನಪಡೆ ಸನ್ನದ್ಧವಾಗುತ್ತಿದೆ.
ಜೂನ್ 20ರಂದು ಮಧ್ಯಪ್ರದೇಶದ ಅರಣ್ಯ ಇಲಾಖೆಗೆ ವೈಲ್ಡ್ ಲೈಫ್ ಸ್ನಿಫರ್ ಡಾಗ್ ಗಳನ್ನು ಸೇರಿಸಲಾಗಿದ್ದು, ಇವುಗಳಿಗೆ ಭೋಪಾಲ್ ನಲ್ಲಿ ಕಠಿಣ ತರಬೇತಿ ನೀಡಿ, ಪರೇಡ್ ನಡೆಸಿ, ಅದರಲ್ಲಿ ತೇರ್ಗಡೆಯಾದ ನಂತರವೇ ಕಾರ್ಯಾಚರಣೆಗೆ ನೇಮಿಸಲಾಗಿದೆ.
ಆದರೆ ವನ್ಯಜೀವಿ ಸಂರಕ್ಷಣೆಗೆ ಶ್ವಾನದಳ ನೇಮಕ ಇದೇ ಮೊದಲೇನಲ್ಲ. ಈಗ ಅದರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲಾಗಿದೆಯಷ್ಟೆ. ವಿಶ್ವ ವನ್ಯಜೀವಿ ನಿಧಿ (ಡಬ್ಲುಡಬ್ಲುಎಫ್) ಹಾಗೂ ಟ್ರಾಫಿಕ್ ಎಂಬ ಎರಡು ಸಂಸ್ಥೆಗಳು ಜಂಟಿಯಾಗಿ ವೆಚ್ಚಭರಿಸಿ ಈ ಯೋಜನೆ ರೂಪಿಸಿದ್ದು, ವನ್ಯಜೀವಿಗಳ ಹಾಗೂ ವನ್ಯಸಂಪತ್ತಿನ ಸಂರಕ್ಷಣೆಯೇ ಇದರ ಮೂಲಗುರಿಯಾದೆ. ಸದ್ಯಕ್ಕೆ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವ ಮಧ್ಯಪ್ರದೇಶ, ಅಸ್ಸಾಂ, ಉತ್ತರಾಖಂಡ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ
ಸ್ನಿಫರ್ ಸೈನ್ಯ ಕಾರ್ಯಸನ್ನದ್ಧವಾಗಲಿದೆ.