ನವದೆಹಲಿ: ಸಾರ್ಕ್ ರಾಷ್ಟ್ರಗಳಿಗಾಗಿಯೇ ಪ್ರತ್ಯೇಕ ಉಪಗ್ರಹ ಉಡಾವಣೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಕ್ಕೆ ಪಾಕಿಸ್ತಾನ ಕೊನೆಗೂ ಒಪ್ಪಿಗೆ ನೀಡಿದೆ.
ಇತರೆ ಸದಸ್ಯರಾಷ್ಟ್ರಗಳೆಲ್ಲವೂ ಎಂದೋ ತಮ್ಮ ಒಪ್ಪಿಗೆ ಸೂಚಿಸಿದ್ದರೂ ಪಾಕಿಸ್ತಾನ ಮಾತ್ರ ಹಲವು ಪ್ರಶ್ನೆಗಳನ್ನು ಕೇಳುತ್ತಾ, ದೂರವೇ ಉಳಿದುಕೊಂಡಿತ್ತು. ಅಂತೂ ಇಂತೂ ಕೊನೆಗಳಿಗೆಯಲ್ಲಿ ತಾನೂ ಈ ಯೋಜನೆಯ ಭಾಗವಾಗಲು ಪಾಕ್ ಒಪ್ಪಿಕೊಂಡಿದ್ದರಿಂದ ಎಲ್ಲ ಸಾರ್ಕ್ ದೇಶಗಳೂ ಭಾಗವಹಿಸಿದಂತಾಗಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಅದನ್ನು ನಭಕ್ಕೆ ಉಡಾಯಿಸುವ ಸಾಧ್ಯತೆ ಹೆಚ್ಚಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಾರ್ಕ್‍ನ ಎಂಟು ಸದಸ್ಯ
ರಾಷ್ಟ್ರಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷವಾದ ಉಪಗ್ರಹ ಸಿದ್ಧಪಡಿಸಲಿದೆ. 2000ಕೆಜಿ ತೂಕದ ಈ ಉಪಗ್ರಹದ ಎಲ್ಲ ಖರ್ಚುಗಳನ್ನೂ ಭಾರತವೇ ನಿಭಾಯಿಸು ತ್ತಿರುವುದು ವಿಶೇಷ. ಶಿಕ್ಷಣ, ಆರೋಗ್ಯ ಮತ್ತು ಸಂಪರ್ಕಕ್ಕೆ ಸಂಬಂಧಪಟ್ಟ ಎಲ್ಲ ಮÁಹಿತಿಗಳನ್ನೂ ಈ ಉಪಗ್ರಹ ರವಾನಿಸಲಿದ್ದು, ವಿಪತ್ತು ಪರಿಸ್ಥಿತಿಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ.