ಗಂಗಾ ನದಿ 
ದೇಶ

ಕಳೆಯಿತು ವರ್ಷ; ಕಾಣದ ಗಂಗಾ ನದಿ ಶುದ್ಧೀಕರಣ

ಎನ್‌ಡಿಎ ಸರ್ಕಾರ ಗಂಗಾ ಶುದ್ಧೀಕರಣ ಯೋಜನೆಗೆ ಚಾಲನೆ ನೀಡಿ ವರ್ಷ ಕಳೆದರೂ ವಾಸ್ತವದಲ್ಲಿ ಇನ್ನೂ ಆರಂಭವೇ ಆಗಿಲ್ಲ. ಗಂಗಾನದಿಕೊಳ್ಳದಲ್ಲಿ ಅತಿ ಹೆಚ್ಚು ಕೊಳೆ...

ನವದೆಹಲಿ: ಎನ್‌ಡಿಎ ಸರ್ಕಾರ ಗಂಗಾ ಶುದ್ಧೀಕರಣ ಯೋಜನೆಗೆ ಚಾಲನೆ ನೀಡಿ ವರ್ಷ ಕಳೆದರೂ ವಾಸ್ತವದಲ್ಲಿ ಇನ್ನೂ ಆರಂಭವೇ ಆಗಿಲ್ಲ. ಗಂಗಾನದಿಕೊಳ್ಳದಲ್ಲಿ ಅತಿ ಹೆಚ್ಚು ಕೊಳೆ ಹೊರ ಸೂಸುವ 764 ಸೇರಿ 3,200 ಕಾರ್ಖಾನೆಗಳು ಅನೈರ್ಮಲ್ಯ ತಡೆಯಲು ಯಾವುದೇ ಕ್ರಮ ಜರುಗಿಸಿಲ್ಲ ಮತ್ತು ಮೇಲ್ವಿ ಚಾರಣಾ ಸಾಧನಗಳನ್ನು ಅಳವಡಿಸಿಲ್ಲ.

ಜೂನ್ 30 ಈ ಕುರಿತು ಕ್ರಮ ಜರುಗಿಸಲು ಅಂತಿಮ ದಿನವಾಗಿದ್ದು ಇನ್ನು ಐದು ದಿನ ಮಾತ್ರ ಬಾಕಿ ಇದೆ. ಕಾರ್ಖಾನೆಗಳಿರಲಿ ಕೇಂದ್ರ ಕೊಳಚೆ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸ್ಥಾಪಿಸಲು ಉದ್ದೇಶಿಸಿದ್ದ 113 ತತ್ ಕ್ಷಣದ ಮೇಲ್ವಿಚಾರಣಾ ಕೇಂದ್ರಗಳು ಭೂ ಸೇರಿದಂತೆ ಹಲವು ಕಾರಣಗಳಿಂದಾಗಿ ಇನ್ನೂ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಲು ವಿಫಲವಾಗಿದೆ. ಸಿಪಿಸಿಬಿ ಸನಿಹದಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಗಳು ಇಲ್ಲ. ಈ ಯೋಜನೆ ಇನ್ನೂ ಒಂದು ವರ್ಷ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಮಂಡಳಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಭೂಮಿ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕೆಂದು ಉತ್ತರಾಖಂಡ್, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳನ್ನು ಸಿಪಿಸಿಬಿ ಮತ್ತೆ ಕೋರಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!