ಆರ್.ಕೆ.ಪಚೌರಿ 
ದೇಶ

ಆರ್.ಕೆ.ಪಚೌರಿಗೆ ಅಮೆರಿಕಕ್ಕೆ ತೆರಳಲು ಕೋರ್ಟ್ ಸಮ್ಮತಿ

ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ(ಟಿಇಆರ್ಐ) ಮಾಜಿ ಮುಖ್ಯಸ್ಥ ಆರ್. ಕೆ. ಪಚೌರಿ ಅವರಿಗೆ ಅಮೆರಿಕಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ...

ನವದೆಹಲಿ: ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ(ಟಿಇಆರ್ ಐ) ಮಾಜಿ ಮುಖ್ಯಸ್ಥ ಆರ್. ಕೆ. ಪಚೌರಿ ಅವರಿಗೆ ಅಮೆರಿಕದಲ್ಲಿ ತಮ್ಮ  ಭಾವನ ಅಂತಿಮ ವಿಧಿ ವಿಧಾನ ಕಾರ್ಯದಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ.

ಮಹಿಳಾ ಉದ್ಯೋಗಿಯೊಬ್ಬರಿಂದ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಆರ್.ಕೆ.ಪಚೌರಿ ಅವರಿಗೆ ಜೂನ್ 29ರಿಂದ ಜುಲೈ 9ರವರೆಗೆ ಅಮೆರಿಕದಲ್ಲಿ ಪ್ರಯಾಣಿಸಲು ಮೆಟ್ರೋಪೊಲಿಟನ್ ನ್ಯಾಯಾಧೀಶೆ ಶಿವಾನಿ ಚೌಹಾನ್ ಅನುಮತಿ ನೀಡಿದ್ದಾರೆ.

 ಅಮೆರಿಕಕ್ಕೆ ತಲುಪಿದಾಗ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿ ತಮ್ಮ ಪ್ರಯಾಣದ ಸಂಪೂರ್ಣ ವಿವರಗಳನ್ನು, ಪ್ರಯಾಣದ ಟಿಕೆಟ್ ಪ್ರತಿಯನ್ನು ಮತ್ತು ಪಾಸ್ ಪೋರ್ಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮತ್ತು ಜುಲೈ 9ಕ್ಕೆ ಭಾರತಕ್ಕೆ ಮರಳಿದಾಗ ಕೋರ್ಟ್ ಗೆ ಮತ್ತು ತನಿಖಾಧಿಕಾರಿಗಳಿಗೆ ತಿಳಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಎರಡು ಲಕ್ಷ ರೂಪಾಯಿಗಳನ್ನು ಪಚೌರಿ ಅವರಿಂದ ಠೇವಣಿ ಇರಿಸಿಕೊಳ್ಳಲಾಗಿದೆ.

ಕಳೆದ ಮಾರ್ಚ್ 21ರಿಂದ ನಿರೀಕ್ಷಣಾ ಜಾಮೀನಿನಲ್ಲಿರುವ ಆರ್.ಕೆ.ಪಚೌರಿ, ಲೈಂಗಿಕ ಕಿರುಕುಳ ಕೇಸಿಗೆ ಸಂಬಂಧಪಟ್ಟಂತೆ ಈ ವಾರದಲ್ಲಿ ಪೊಲೀಸರಿಂದ ಎರಡು ಬಾರಿ ವಿಚಾರಣೆಗೆ ಒಳಗಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನನ್ನಗೆ ಸಾವಿನ ಭಯವಿರಲಿಲ್ಲ: ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ ಸಹ-ಪೈಲಟ್ ಹಮ್ಮಾಮಿ

ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ, ಓರ್ವ ಸಾವು, ಹಲವರಿಗೆ ಗಾಯ! Video

ಚುನಾವಣಾ ಪ್ರಚಾರದಲ್ಲಿ ಮಗು ಬಳಕೆ ಆರೋಪ: DMK ಶಾಸಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಸ್ ದಾಖಲು!

'ಹಿಂದೂಗಳಲ್ಲ, ಮುಸ್ಲಿಮರೇ ಕಳ್ಳ​ ವೋಟು ಹಾಕೋದು': ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್-Video

SIR: ‘ಜ್ಞಾನೇಶ್ ಕುಮಾರ್ ಬಿಜೆಪಿಯ ಅಸ್ತ್ರ, SIR ರದ್ದುಪಡಿಸಿ': ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಠಾಕ್ರೆ ಸೋದರ ಸಂಬಂಧಿಗಳ ಆಗ್ರಹ!