ದೇಶ

ಕರಾಚಿಗೆ ಭಾರತ ಮೂಲಕ ತೆರಳಿತ್ತು ಚೀನಾ ಸಬ್ ಮೆರಿನ್

Mainashree

ನವದೆಹಲಿ: ಚೀನಾದ ಅತ್ಯಾಧುನಿಕ ಜಲಾಂತರ್ಗಾಮಿಯೊಂದು ಭಾರತೀಯ ಜಲಮಾರ್ಗದ ಮೂಲಕ ಸಾಗಿ ಕರಾಚಿ ಬಂದರಿನಲ್ಲಿ ತಂಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಚೀನಾದ ಯುವಾನ್ ಕ್ಲಾಸ್ 335 ಜಲಾಂತರ್ಗಾಮಿ ಅರಬ್ಬೀಸಮುದ್ರವನ್ನು ದಾಟಿ ಮೇ 22ರಂದು ಕರಾಚಿ ಬಂದರು ತಲುಪಿದೆ. ಚೀನಾಗೆ ವಾಪಸಾಗುವ ಮೊದಲು ಕನಿಷ್ಠ ವಾರ ಕಾಲ ಕರಾಚಿ ಬಂದರಿನಲ್ಲಿ ತಂಗಿದೆ. ಪ್ರಧಾನಿ ಮೋದಿ ಚೀನಾ ಭೇಟಿ ಮುಗಿಸಿ ವಾರದ ನಂತರ ಈ ಬೆಳವಣಿಗೆ ನಡೆದಿದೆ.
ಚೀನಾದ ಈ ಸಬ್‍ಮೆರಿನ್ ಟಾರ್ಪೋಡಸ್, ಆ್ಯಂಟಿಶಿಪ್ ಕ್ಷಿಪಣಿಗಳನ್ನು ಹೊಂದಿದೆ. ಆದರೆ, ಈ ಸಬ್‍ಮೆರಿನ್ ಭಾರತದ ಭದ್ರತಾ ಸಂಸ್ಥೆಗಳ ಗಮನಸೆಳೆದದ್ದು ಇದೇ ಮೊದಲು.

SCROLL FOR NEXT