ಡೆಹ್ರಾಡೂನ್: ಗುಜರಾತ್ ಪ್ರವಾಹದಲ್ಲಿ ಅಸುನೀಗಿದ್ದು 5 ಅಲ್ಲ 9 ಸಿಂಹಗಳು ಎಂಬ ವಿಚಾರ ದೃಢಪಟ್ಟಿದೆ. ಗುಜರಾತ್‍ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸಿ.ಪಂತ್ ಪ್ರಕಾರ 100
ಸಿಬ್ಬಂದಿ ಗಿರ್ ಸಿಂಹೋದ್ಯಾನದ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಿರತರಾಗಿದ್ದಾರೆ.
ನದಿಯ ತಟದ ಗ್ರಾಮಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 27 ಸಿಂಹಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಅವುಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದಿದ್ದಾರೆ. ಈ ಬಗ್ಗೆ ಪ್ರಾಣಿ ಪ್ರಿಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಗುಜರಾತ್ ಸರ್ಕಾರ ಸಿಂಹಗಳ ರಕ್ಷಣೆಗೆ ನೆರೆಯ ಮಧ್ಯಪ್ರದೇಶದ ನೆರವನ್ನು ಕೋರಿದೆ.
ಧಾರಾಕಾರ ಮಳೆ: ಉತ್ತರಾಖಂಡದಲ್ಲಿ ಭಾನುವಾರ ತಡರಾತ್ರಿಧಾರಾಕಾರ ಮಳೆಯಾಗಿದೆ. ಡೆಹ್ರಾಡೂನ್‍ಲ್ಲಿಯೂ ಮಳೆಯಾಗಿದ್ದು, ಭಾರಿ ಗಾತ್ರದ ಮರಗಳು ಬುಡಮೇಲಾಗಿವೆ. ಇದರಿಂದಾಗಿ ಕಳೆದ ರಾತ್ರಿಯಿಂದೀಚೆಗೆ ವಿದ್ಯುತ್ ಸಂಪರ್ಕ ಕಡಿದುಹೋಗಿದೆ.ನಾಗರಿಕರು ಸಂಕಷ್ಟಪಡುವಂತಾಗಿದೆ. ದೇವ ಪ್ರಯಾಗ, ಲ್ಯಾನ್ಸ್‍ಡೌನ್ ಮತ್ತು ಡೆಹ್ರಾಡೂನ್‍ನಲ್ಲಿ ಅತ್ಯಂತ ಹೆಚ್ಚು ಮಳೆಯಾದ ಸ್ಥಳಗಳು.