ದೇಶ

ಲಲಿತ್ ಮೋದಿ ಭೇಟಿ ಆಗಿಲ್ಲ: ಶಾರುಖ್

Vishwanath S

ಮುಂಬೈ: ಐಪಿಎಲ್ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ಅವರನ್ನು ಲಂಡನ್‍ನಲ್ಲಿ ಭೇಟಿಯೇ ಆಗಿಲ್ಲ ಎಂದು ಬಾಲಿವುಡ್ ಸೂಪರ್‍ ಸ್ಟಾರ್ ಸ್ಪಷ್ಟನೆ ನೀಡಿದ್ದಾರೆ.

ಶೂಟಿಂಗ್‍ಗೆಂದು ಹೊರದೇಶಕ್ಕೆ ಹೋಗಿದ್ದ ಶಾರುಖ್ ಅವರು ಲಂಡನ್ ಮೂಲಕ ಸ್ವದೇಶಕ್ಕೆ ಆಗಮಿಸಿದ್ದರು. ಹಾಗಾಗಿ ಅವರು ಲಂಡನ್‍ನಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು ಎನ್ನುವ
ಸುದ್ದಿಯಿತ್ತು. ಇದನ್ನು ತಳ್ಳಿಹಾಕಿದ ಶಾರುಖ್‍ಖಾನ್ ನನಗೆ ಲಂಡನ್‍ನಲ್ಲಿ ಸಮಯ ಕಳೆಯಲು ಪುರುಸೊತ್ತೇ ಇರಲಿಲ್ಲ.

ಬಲ್ಗೇರಿಯಾದಲ್ಲಿ ಶೂಟಿಂಗ್ ಮುಗಿದದ್ದೇ ಸಂಜೆಯ ವೇಳೆಗೆ. ರಾತ್ರಿಯಿಡೀ ಮಾತುಕತೆಯಲ್ಲಿ ಕಳೆದ ನಾವು ವಿಮಾನ ಹತ್ತಿದ್ದೇ ರಾತ್ರಿ ಎರಡು ಗಂಟೆಗೆ ಎಂದು ಅವರು ಹೇಳಿದ್ದಾರೆ.

ಮಗಳ ಮತ್ತು ಮಗನ ಶಾಲೆಗೆ ಸೇರ್ಪಡೆ ಕೆಲಸ ಇದ್ದದ್ದರಿಂದ ತುರ್ತಾಗಿ ಭಾರತಕ್ಕೆ ಆಗಮಿಸಬೇಕಿತ್ತು ಎಂದು ಶಾರುಖ್ ಖಾನ್ ಹೇಳಿದ್ದಾರೆ.

SCROLL FOR NEXT