ಚೆನ್ನೈ: ಚೆನ್ನೈನ ನಿವಾಸದಲ್ಲಿ 300 ಸಾಮರ್ಥ್ಯಗಳ ದೂರವಾಣಿ ಕೇಂದ್ರ ಹೊಂದಿದ್ದ ಆರೋಪ ಸಂಬಂಧ ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್‍ಗೆ ಮದ್ರಾಸ್ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದಯಾನಿಧಿ ಮಾರನ್ ಈ ಹಿಂದೆ ಶರಣಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ 9ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಶರವಣನ್ ಅವರು ದಯಾನಿಧಿ ಮಾರನ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ದಯಾನಿಧಿ ಮಾರನ್ ಪರ ವರೀಲರು ನ್ಯಾಯಮೂರ್ತಿ ಸುಬ್ಬಯ್ಯ ಅವರಿಗೆ ಶೂರಿಟಿ ದಾಖಲೆಗಳನ್ನು ಸಲ್ಲಿಕೆ ಮಾಡುವ ಮೂಲಕ ಜಾಮೀನು ಪಡೆದುಕೊಂಡರು. ಇದೇ ಪ್ರಕರಣದಲ್ಲಿ ಮಾರನ್‍ರನ್ನು ಬುಧವಾರ ಸಿಬಿಐ ವಿಚಾರಣೆಗೊಳಪಡಿಸಲಿದೆ.