ನವದೆಹಲಿ: ವಿವಾದಾತ್ಮಕ ಉದ್ಯಮಿ ಮೊಯಿನ್ ಅಖ್ತರ್ ಖುರೇಶಿ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ . ರು. 20 ಕೋಟಿ ಆದಾಯಕ್ಕೆ ಸಂಬಂಧಿಸಿದಂತೆ ಖುರೇಶಿ ದಾಖಲೆ ಪತ್ರಗಳನ್ನು ಸಲ್ಲಿಸಿಲ್ಲ ಎಂದು ಈಚೆಗೆ ಆದಾಯ ತೆರಿಗೆ ಇಲಾಖೆ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು . ಈ ಸಂಬಂಧ ಜ. 30ರಂದು ದೆಹಲಿ ನ್ಯಾಯಾಲಯ ಖುರೇಶಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಕಪ್ಪುಹಣದ ಕೇಸಿನಲ್ಲಿ ಭಾಗಿಯಾಗಿರುವ ಖುರೇಶಿ ಹಾಗೂ ಆತನ ಸಹೋದ್ಯೋಗಿ ಆದಿತ್ಯ ಶರ್ಮ ನ್ಯಾಯಾಲಯಕ್ಕೆ ರು. 50 ಸಾವಿರ ಬಾಂಡ್ ಸಲ್ಲಿಸಿದ್ದರಿಂದ ಹೆಚ್ಚುವರಿ ಮೆಟ್ರೋ ಪಾಲಿಟಿನ್ ಮ್ಯಾಜಿಸ್ಟ್ರೇಟ್ ದೇವೇಂದ್ರ ಕುಮಾರ್ ಶರ್ಮ ಜಾಮೀನು ನೀಡಿದ್ದಾರೆ. ಜತೆಗೆ ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತನ್ನು ಹಾಕಿದ್ದಾರೆ ಮುಂದಿನ ವಿಚಾರಣೆ ಏಪ್ರಿಲ್ 29 ರಂದು ನಡೆಯಲಿದೆ.