ದೇಶ

ಮೋಹನ್ ಭಾಗವತ್ ಕ್ಷಮೆ ಕೋರುವಂತೆ ಆಂಧ್ರಪ್ರದೇಶದಲ್ಲಿ ಪ್ರತಿಭಟನೆ

ವಿಜಯವಾಡ: ಮದರ್ ತೆರೇಸಾ ಕುರಿತಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ವಿರೋಧಿಸಿ ಆಂಧ್ರಪ್ರದೇಶದಾದ್ಯಂತ ಕ್ರಿಶ್ಚಿಯನ್ ಸಮುದಾಯದ ಜನರು ಮಂಗಳವಾರ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದರು.

ಮದರ್ ತೆರೇಸಾ ಯಾವುದೇ ದೇಶ, ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಇಡೀ ವಿಶ್ವಕ್ಕೆ ಮಾದರಿಯಾದ ಮಹಾನ್ ಚೇತನ ಅವರು. ಅಂತಹವರ ವಿರುದ್ಧ ಮತಾಂತರ ಆರೋಪ ಮಾಡುತ್ತಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಎಂತಹ ಕೀಳು ಮಟ್ಟದ ಪ್ರವೃತ್ತಿಯುಳ್ಳವರು ಎಂದು ಪ್ರತಿಭಟನಾನಿರತಕಾರರು ರ್ಯಾಲಿಯಲ್ಲಿ ಟೀಕಿಸಿದ್ದು, ಮೋಹನ್ ಭಾಗವತ್ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ..

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಉದ್ದೇಶಪೂರ್ವಕವಾಗಿ ಮದರ್ ತೆರೇಸಾ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮದರ್ ತೆರೇಸಾ ಅವರು ಬಡವರಿಗೆ ಸಹಾಯ ಮಾಡುತ್ತಿದ್ದರು. ಆದರೆ ಇದರಲ್ಲಿ ಯಾವ ಹುನ್ನಾರವು ಇರಲಿಲ್ಲ. ಮಂತಾಂತರಕ್ಕಾಗಿ ಮದರ್ ತೆರೇಸಾ ಬಡವರಿಗೆ ಸಹಾಯ ಮಾಡುತ್ತಿದ್ದರು ಎಂಬುದು ಅಕ್ಷರ ಸಹ ತಪ್ಪು ಹೇಳಿಕೆ ಎಂದು ಎಂ.ಚಿನ್ನಪ್ಪ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಸಮಾಜ ಸೇವೆ ಕೇಂದ್ರದ ನಿರ್ದೇಶಕ ಫಾದರ್ ಪ್ರಸಾದ್, ಮದರ್ ತೆರೇಸಾ ಅವರು ಬಡಜನರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದರೇ ವಿನಃ ಎಂದಿಗೂ ಮತಾಂತರದ ಕುರಿತು ಆಲೋಚನೆ ಮಾಡಿದವರಲ್ಲ ಎಂದು ಹೇಳಿದ್ದಾರೆ.

SCROLL FOR NEXT