ಅತ್ಯುತ್ತಮ ಯೋಗ್ಯ ವಾಸ ಸ್ಥಳದಲ್ಲಿ ಬೆಂಗಳೂರಿಗೆ 146ನೇ ಸ್ಥಾನ 
ದೇಶ

ಭಾರತದ ಅತ್ಯುತ್ತಮ ಯೋಗ್ಯ ವಾಸ ಸ್ಥಳದಲ್ಲಿ ಬೆಂಗಳೂರಿಗೆ 146ನೇ ಸ್ಥಾನ

ಭಾರತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯುತ್ತಮ ವಾಸಕ್ಕೆ ಯೋಗ್ಯವಾದ ನಗರಗಳಲ್ಲಿ ಬೆಂಗಳೂರಿಗೆ 146ನೇ ಸ್ಥಾನ ಸಿಕ್ಕಿದ್ದು, ಹೈದರಾಬಾದ್‌ಗೆ 198ನೇ ಸ್ಥಾನ ಸಿಕ್ಕಿದೆ...

ನವದೆಹಲಿ: ಭಾರತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯುತ್ತಮ ವಾಸಕ್ಕೆ ಯೋಗ್ಯವಾದ ನಗರಗಳಲ್ಲಿ ಬೆಂಗಳೂರಿಗೆ 146ನೇ ಸ್ಥಾನ ಸಿಕ್ಕಿದ್ದು, ಹೈದರಾಬಾದ್‌ಗೆ 198ನೇ ಸ್ಥಾನ ಸಿಕ್ಕಿದೆ.

2015ರ ವಿಶ್ವದ ಅತೀ ಹೆಚ್ಚು ಯೋಗ್ಯ ವಾಸಸ್ಥಳದ ಕುರಿತು ಮರ್ಸರ್ಸ್ ಕ್ವಾಲಿಟಿ ಲಿವಿಂಗ್ ನಡೆಸಿದ ಸಮೀಕ್ಷೆಯಿಂದ ಈ ವಿಷಯ ತಿಳಿದುಬಂದಿದ್ದು, ಫಲಿತಾಂಶದಲ್ಲಿ ಹೈದರಾಬಾದ್ 198, ಪುಣೆ 145, ಬೆಂಗಳೂರು 146, ಚೆನ್ನೈ 151, ಮುಂಬೈ 152, ನವದೆಹಲಿ 154, ಕೋಲ್ಕತಾ 160 ಸ್ಥಾನ ಪಡೆದಿದೆ.

ಇನ್ನು ಆಸ್ಟ್ರಿಯಾದ ವೆಯೆನ್ನಾ ನಗರವು ಎರಡನೇ ಸ್ಥಾನ ಪಡೆದಿದ್ದು, ಯುರೋಪಿನ ಕೆಲವು ನಗರಗಳು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜುರಿಕ್, ಆಕ್ಲ್ಯಾಂಡ್, ಮುನಿಕ್ ದೇಶಗಳೂ ಸಹ ಎರಡು, ಮೂರು ಮತ್ತು ನಾಲ್ಕು, ಐದನೇ ಸ್ಥಾನಗಳನ್ನು ಪಡೆದಿದೆ. ಇದರಲ್ಲಿ ಉತ್ತರ ಅಮೇರಿಕಾ ಎಲ್ಲಾ ದೇಶಕ್ಕಿಂತಲೂ ಅತೀ ಹೆಚ್ಚು ರ್ಯಾಂಕ್ ಪಡೆದುಕೊಂಡಿದೆ.

ವಿಶ್ವದಲ್ಲಿಯೇ ಅತಿ ಹೆಚ್ಚು ಯೋಗ್ಯ ವಾಸಸ್ಥಳ ಯಾವುದು ಎಂಬುದರ ಕುರಿತು ಮರ್ಸರ್ಸ್ ಕ್ವಾಲಿಟಿ ಲಿವಿಂಗ್ ನಡೆಸಿದ್ದ ಸಮೀಕೆಯ ವರದಿಯಲ್ಲಿ ಭಾರತ ನಗರಗಳು ವಾಸಿಸಲು ಯೋಗ್ಯವಾದ ಸ್ಥಳಗಳ ಕುರಿತಂತೆ ಯಾವುದೇ ಅಭಿವೃದ್ಧಿಯನ್ನು ಕೈಗೊಳ್ಳುದೆ ಇರುವುದರಿಂದ ಹಿಂದಿನ ಸಮೀಕ್ಷೆಯ ವರದಿಯಲ್ಲಿದ್ದ ರ್ಯಾಂಕಿಂಗ್ ಸಂಖ್ಯೆಯನ್ನೇ ಪಡೆದಿದೆ ಎಂದು ಹೇಳಿದೆ.

ಹೈದರಾಬಾದ್‌ನ್ನು ಗಮನಿಸಿದಾಗ ಕಳೆದ ಬಾರಿಯ ಅಭಿವೃದ್ಧಿ ಕಾರ್ಯಕ್ಕಿಂತ ಈ ಬಾರಿ ಕೊಂಚ ಬೆಳವಣಿಗೆ ಕಂಡಿದೆ. ಅಂತರಾಷ್ಟ್ರೀಯ ಶಾಲೆಗಳು, ಇಂಗ್ಲೀಷ್ ಮಾಧ್ಯಮ ಶಾಲೆಗಳು, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಿಂದ ನಗರಕ್ಕೆ ಪ್ರವೇಶ ಮಾಡಲು ಕೇವಲ 22 ಕಿ.ಮೀ ಇರುವುದರಿಂದ ಅಂತರಾಷ್ಟ್ರೀಯ ವಿಮಾನಗಳು ಹೋಗಲು ಬರಲು ಸುಲಭವಾಗುತ್ತದೆ. ಸಾರ್ವಜನಿಕರಿಗೆ ಹೈದರಾಬಾದ್ ಹಾಗೂ ಪುಣೆ ನಗರಗಳು ಸಾರ್ವಜನಿಕರಿಗಾಗಿ ಉತ್ತಮ ಸೇವೆಗಳನ್ನು ಮಾಡುತ್ತಿರುವುದರಿಂದ ಭಾರತದ ಇತರೆ ನಗರಗಳಿಗೆ ಹೋಲಿಸಿದರೆ ಮೇಲಿನ ಸ್ಥಾನ ಪಡೆದಿದೆ ಎಂದು ವರದಿಯಲ್ಲಿ ಹೇಳಿದೆ.

ಭಾರತದಲ್ಲಿ ನವದೆಹಲಿ ಮತ್ತು ಮುಂಬೈ ನಗರಗಳಲ್ಲಿ ಅತಿ ಜನಸಂಖ್ಯೆ ಹೊಂದಿರುವುದರಿಂದ ಈ ನಗರಗಳಲ್ಲಿ ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ವಾಹನ ದಟ್ಟನೆಯಂತಹ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮವೇ ಗ್ಲೋಬಲ್ ಲಿವಿಂಗ್ ಸ್ಕೋರ್‌ನಲ್ಲಿ ಶ್ರೇಣಿ ಪಡೆಯಲು ಭಾರತ ಹಿನ್ನಡೆ ಪಡೆಯುತ್ತಿರುವುದು ಎಂದು ರುಚಿಕಾ ಪಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!