ನವದೆಹಲಿ: ಔಟ್‌ಲುಕ್ ಸಾಪ್ತಾಹಿಕ ಸಂಸ್ಥಾಪಕ ಹಾಗೂ ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ಅವರು ಭಾನುವಾರ ನಿಧನರಾಗಿದ್ದಾರೆ.
ಮೆಹ್ತಾ ಅವರು 1942 ರಲ್ಲಿ ಈಗ ಪಾಕಿಸ್ಥಾನದಲ್ಲಿರುವ ರಾವಲ್ಪಿಂಡಿಯಲ್ಲಿ ಜನಿಸಿದ್ದರು. ವಿನೋದ್ ಮೆಹ್ತಾ ಅವರಿಗೆ 73 ವರ್ಷ ವಯಸ್ಸಾಗಿದ್ದು, ದೀರ್ಘಾವದಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದಾರೆ.